ಜಾರ್ಜಿಯಾ ರೆಸ್ಟೋರೆಂಟ್‌ನಲ್ಲಿ 12 ಭಾರತೀಯರ ಶವಗಳು ಪತ್ತೆ; ಭಾರತೀಯ ರಾಯಭಾರಿ ಕಚೇರಿ ಹೇಳಿದಿಷ್ಟು?

dk (9)
Published on

ಟಿಬಿಲಿಸಿ: ಇಲ್ಲಿನ ಜಾರ್ಜಿಯಾದ ಜನಪ್ರಿಯ ಪರ್ವತ ರೆಸಾರರ್ಟ್​ನ ಗುಡೌರಿಯಲ್ಲಿರುವ ರೆಸ್ಟೋರೆಂಟ್‌ವೊಂದರಲ್ಲಿ 12 ಭಾರತೀಯರ ಶವಗಳು ಪತ್ತೆಯಾಗಿದ್ದಾರೆ ಎಂದು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಎಲ್ಲಾರೂ ಭಾರತೀಯ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಎಂದು ಗುರುತಿಸಲಾಗಿದ್ದು, ಅದೇ ಎರಡನೇ ಮಹಡಿಯಲ್ಲಿರುವ ಮಲಗುವ ಕೋಣೆಗಳಲ್ಲಿ ಶವಗಳು ಪತ್ತೆಯಾಗಿವೆ. ಎಲ್ಲಾ ಸಾವುಗಳು ಕಾರ್ಬನ್ ಮಾನಾಕ್ಸೈಡ್ ವಿಷದಿಂದ ಉಂಟಾಗಿದೆ. ದೇಹದ ಮೇಲೆ ಯಾವುದೇ ಗೋಚರ ಗಾಯಗಳು ಅಥವಾ ಹಿಂಸಾಚಾರದ ಚಿಹ್ನೆಗಳಿಲ್ಲ ಎಂದು ರಾಯಭಾರಿ ಕಚೇರಿನ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ತನಿಖಾ ಸಂಶೋಧನೆಗಳು ಮಲಗುವ ಕೋಣೆಗಳ ಬಳಿ ಒಳಾಂಗಣ ಜಾಗದಲ್ಲಿ ವಿದ್ಯುತ್ ಜನರೇಟರ್ ಅನ್ನು ಇರಿಸಲಾಗಿದೆ. ಶುಕ್ರವಾರ ತಡರಾತ್ರಿ ವಿದ್ಯುತ್ ಸರಬರಾಜು ಅಡಚಣೆಯ ನಂತರ ಇದು ಸ್ಟಾರ್ಟ್​ ಆಗಿದೆ. ಜನರೇಟರ್ ಕಾರ್ಬನ್ ಮಾನಾಕ್ಸೈಡ್ ವಿಷದ ಹೊಗೆ ಬಿಟ್ಟಿದೆ. ಈ ಹಿನ್ನೆಲೆ 12 ಜನ ಮಲಗಿದ್ದಾಗಲೇ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.

ಶವಗಳ ಮರಣೋತ್ತರ ಪರೀಕ್ಷೆಯ ಬಳಿಕ ಸಾವುಗಳ ನಿಖರ ಮಾಹಿತಿ ದೊರೆಯಲಿದೆ ಎಂದು ಜಾರ್ಜಿಯಾ ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net