ರೋಟರಿ ಬೆಂಗಳೂರು ಸೌತ್​ ಎಂಡ್​ನಿಂದ ರಕ್ತದಾನ ಶಿಬಿರ; ಇಲ್ಲಿದೆ ವಿವರ..

worldblood
Published on

ಬೆಂಗಳೂರು: ರೋಟರಿ ಬೆಂಗಳೂರು ಸೌತ್ ಎಂಡ್ ಸಂಸ್ಥೆಯು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಜೆ.ಪಿ.ನಗರದ 7ನೇ ಹಂತದ ಆರ್​ಬಿಐ ಬಡಾವಣೆಯ ಇಕ್ವಿಟಾಸ್ ಬ್ಯಾಂಕ್​ನಲ್ಲಿ ಜುಲೈ 1ರ ಶನಿವಾರ ಈ ಕಾರ್ಯಕ್ರಮ ನಡೆಯಲಿದೆ.

ರೋಟರಿ ಕ್ಲಬ್ ಮತ್ತು ಇಂಡಿಯನ್ ರೆಡ್​ಕ್ರಾಸ್ ಸಂಸ್ಥೆ ಜಂಟಿಯಾಗಿ ನಡೆಸುತ್ತಿರುವ ಈ ರಕ್ತದಾನ ಶಿಬಿರವು ಶನಿವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 3ರ ವರೆಗೆ ನಡೆಯಲಿದೆ. ಒಮ್ಮೆ ರಕ್ತದಾನ ಮಾಡುವುದರಿಂದ ಮೂರು ಜೀವಗಳನ್ನು ಉಳಿಸಬಹುದು ಎಂದಿರುವ ಸಂಸ್ಥೆ, ಆಸಕ್ತರು ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಕೋರಿದೆ.

ರಕ್ತ ನೀಡಲು ಬಯಸುವ ದಾನಿಗಳು ಹೆಚ್ಚಿನ ಮಾಹಿತಿಗಾಗಿ ರೋಟರಿ ಬೆಂಗಳೂರು ಅಧ್ಯಕ್ಷ ರಾಧಾಕೃಷ್ಣನ್ (9844666300), ಕಾರ್ಯದರ್ಶಿ ಧನುಷ್ (9742242313), ನಿರ್ದೇಶಕ ಧನಶೇಖರ್ (9845943779) ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net