ಪಾಕ್ ಭಯೋತ್ಪಾದಕರ ಕಪ್ಪುಪಟ್ಟಿ ಸಿದ್ಧವಾಗಿಲ್ಲ; ವಿಶ್ವ ಸಂಸ್ಥೆ ಸ್ಪಷ್ಟನೆ

pak1
Published on

ನವದೆಹಲಿ: ಪಾಕಿಸ್ತಾನ ಅನೇಕ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯತಾಣವಾಗಿದೆ. ಮಾತ್ರವಲ್ಲದೆ ಸ್ವತಃ ಅನೇಕ ಪಾಕಿಸ್ತಾನಿ ಪ್ರಜೆಗಳೇ ಬೇರೆ ದೇಶಗಳಲ್ಲಿ ಹಲವು ಉಗ್ರ ಸಂಘಟನೆಗಳನ್ನು ಮುನ್ನಡೆಸುತ್ತಿದ್ದಾರೆ. ಆದರೆ ಅಂಥ ಭಯೋತ್ಪಾದಕರ ಕಪ್ಪುಪಟ್ಟಿ ಪಟ್ಟಿಯೇ ಸಿದ್ಧವಾಗಿಲ್ಲ. ಅವರನ್ನು ಜಾಗತಿಕ ಭಯೋತ್ಪಾದಕರೆಂದು ಘೋಷಿಸಿಲ್ಲ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

ಪಾಕಿಸ್ತಾನದ ಇಂಥ ಭಯೋತ್ಪಾದಕರು ಇರಾಕ್ ಮತ್ತು ಲೆವಾಂಟ್​ನ ಇಸ್ಲಾಮಿಕ್ ಸ್ಟೇಟ್ - ಕೊರಾಸನ್ (ಐಎಸ್​ಐಎಲ್-ಕೆ), ಅಲ್ ಖೈದಾ ಮತ್ತಿತರ ಉಗ್ರ ಸಂಘಟನೆಗಳ ನಾಯಕತ್ವ ವಹಿಸಿದ್ದಾರೆ.

ಐಎಸ್​ಐಎಲ್, ಅಲ್ ಖೈದಾ ಹಾಗೂ ಅದರೊಂದಿಗೆ ನಂಟಿರುವ ವ್ಯಕ್ತಿಗಳ ಕುರಿತು ವಿಶ್ವ ಸಂಸ್ಥೆ ಈ ವರದಿ ತಯಾರಿಸಿದೆ. ಅಫ್ಘಾನಿಸ್ತಾನದ ವಿಶೇಷ ಪಡೆಗಳು ಇದೇ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದೇಶವ್ಯಾಪಿ ಕಾರ್ಯಾಚರಣೆ ನಡೆಸಿ ಐಎಸ್​ಐಎಲ್-ಕೆ ಮುಖ್ಯಸ್ಥ ಅಸ್ಲಾಂ ಫಾರೂಕಿ ಮತ್ತು ಆತನ ಪೂರ್ವಾಧಿಕಾರಿ ಜಿಯಾ ಉಲ್ ಹಕ್ ಅಲಿಯಾಸ್ ಅಬು ಒಮರ್ ಕೊರಾಸನ್, ಮತ್ತಿತರರನ್ನು ಬಂಧಿಸಿದ್ದವು. ಆದರೆ

ಆತನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಿತಿ ಇನ್ನೂ ಕಪ್ಪುಪಟ್ಟಿಗೆ ಸೇರಿಸಿಲ್ಲ. ಹಕ್ ಕೂಡ ಪಾಕಿಸ್ತಾನಿ ಪ್ರಜೆಯಾಗಿದ್ದು ಆತನ ಹೆಸರು ಕೂಡ ಪಟ್ಟಿಯಲ್ಲಿ ಸೇರಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net