More

    ಐಸಿಸ್​ ಉಗ್ರರು ನಮ್ಮ ನಡುವೆಯೇ ಹೆಚ್ಚಾಗಿದ್ದಾರೆ…! ವಿಶ್ವ ಸಂಸ್ಥೆ ನೀಡಿದೆ ಆಘಾತಕಾರಿ ಮಾಹಿತಿ

    ನವದೆಹಲಿ: ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಐಸಿಸ್​ ಉಗ್ರರು ಇರೋದು ಎಲ್ಲಿ ಗೊತ್ತೆ? ಈ ಬಗ್ಗೆ ವಿಶ್ವ ಸಂಸ್ಥೆ ಅತ್ಯಂತ ಆಘಾತಕಾರಿ ಮಾಹಿತಿ ನೀಡಿದೆ.

    ಭಾರತೀಯ ಉಪಖಂಡದಲ್ಲಿ ಕಾರ್ಯಾಚರಿಸುತ್ತಿರುವ ಅಲ್​ಕೈದಾ ಸಂಘಟನೆಯಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಮಯನ್ಮಾರ್​ನ 150- 200 ಉಗ್ರರಿದ್ದು, ಈ ಪ್ರದೇಶದಲ್ಲಿ ದಾಳಿಗೆ ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

    ಅಲ್​ಖೈದಾ, ಐಸಿಸ್ ಹಾಗೂ ಇತರ ಉಗ್ರ ಸಂಘಟನೆಗಳ ಚಟುವಟಿಕೆಗಳ ಮೇಲೆ ನಿಗಾ ಇರಿಸಿರುವ ವಿಶ್ವ ಸಂಸ್ಥೆಯ ತಂಡದ ವಿಶ್ಲೇಷಣಾತ್ಮಕ ವರದಿ ಪ್ರಕಾರ, ಅಫ್ಘಾನಿಸ್ತಾನದ ನಿಮ್ರೂಝ್​, ಹೆಲ್ಮಾಂಡ್​ ಹಾಗೂ ಕಂದಹಾರ್​ ಮೂಲಕ ಭಾರತೀಯ ಉಪಖಂಡದಲ್ಲಿ ತಾಲಿಬಾನಿಗಳ ಅಧೀನದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

    ಇದನ್ನೂ ಓದಿ; ತುರ್ತು ಬಳಕೆಗೆ ಭಾರತದಲ್ಲಿ ರೆಡಿಯಾಗಿದೆ ಕರೊನಾ ಲಸಿಕೆ; ಏಷ್ಟಿರಲಿದೆ ಬೆಲೆ ?

    ಭಾರತೀಯ ಉಪ ಖಂಡದಲ್ಲಿ ಕಾರ್ಯಾಚರಿಸುತ್ತಿರುವ ತಂಡದಲ್ಲಿ 150- 200 ಉಗ್ರರಿದ್ದಾರೆ. ಇವರಿಗೆ ಒಸಾಮಾ ಮಹಮೂದ್​ ನಾಯಕನಾಗಿದ್ದಾನೆ. ಅಸೀಂ ಉಮರ್​ ಬಳಿಕ ಈ ಸ್ಥಾನಕ್ಕೆ ಬಂದಿದ್ದು, ಆತನ ಹತ್ಯೆಯ ಪ್ರತೀಕಾರಕ್ಕೆ ಸಂಚು ರೂಪಿಸುತ್ತಿದ್ದಾನೆ ಎಂದು ತಂಡ ಮಾಹಿತಿ ನೀಡಿದೆ.

    ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಯಲ್ಲಿ 180ರಿಂದ 200 ಉಗ್ರರಿದ್ದಾರೆ ಎಂದು ಇತ್ತೀಚೆಗೆ ಐಸಿಸ್​ ಹೇಳಿಕೊಂಡಿತ್ತು. ಆತಂಕದ ವಿಚಾರವೆಂದರೆ, ಇವರಲ್ಲಿ ಹೆಚ್ಚಿನವರು ಕರ್ನಾಟಕ ಹಾಗೂ ಕೇರಳದಲ್ಲಿ ಬೀಡು ಬಿಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
    ಭಾರತದಲ್ಲಿ ತನ್ನದೊಂದು ಪ್ರಾಂತ್ಯವನ್ನು ರಚಿಸಿರುವುದಾಗಿ ಐಸಿಸ್​ ಹೇಳಿಕೊಂಡಿತ್ತು. ಇದಕ್ಕೆ ವಿಲಾಯಾ ಹಿಂದ್​ (ಅರೇಬಿಕ್​ನಲ್ಲಿ ಭಾರತೀಯ ಪ್ರಾಂತ್ಯ ಎಂದರ್ಥ) ಹೆಸರಿಟ್ಟಿರುವುದಾಗಿ ಘೋಷಿಸಿತ್ತು.

    ಇದನ್ನೂ ಓದಿ; ಮಕ್ಕಳು ಬೇಡ, ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಲಿ; ಡೆತ್​ನೋಟ್​ ಬರೆದಿಟ್ಟು ಪಯಣ ಮುಗಿಸಿದ ದಂಪತಿ

    ಈ ಹಿಂದೆ ಜಮ್ಮು ಕಾಶ್ಮೀರದಲ್ಲಿ ಐಸಿಸ್​ ನಡೆಸಿದ್ದ ದಾಳಿಗೆ ಪಾಕಿಸ್ತಾನ್​ ಹಾಗೂ ಅಫ್ಘಾನಿಸ್ತಾನ್​ ಹಾಗೂ ಸುತ್ತಲಿನ ಸ್ಥಳದಲ್ಲಿ ಕಾರ್ಯಾಚರಿಸುವ ಖೋರಾಸನ್​ ಪ್ರಾಂತ್ಯ ಅಥವಾ ಘಟಕದ ಕೃತ್ಯ ಎಂದು ಹೇಳಲಾಗುತ್ತಿತ್ತು.

    ಧರ್ಮ ಮುಚ್ಚಿಟ್ಟು ಪ್ರೀತಿ ನಾಟಕ; ಲವ್​ ಜಿಹಾದ್​ಗೆ ಮಹಿಳೆ- ಮಗಳು ಬಲಿ; ಇಬ್ಬರನ್ನೂ ಕೊಂದು ಮನೆಯಲ್ಲಿ ಹೂತು ಹಾಕಿದ ಪಾಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts