ಸಿಎಎಗೆ ಮಾತ್ರ ಅವಕಾಶವಿಲ್ಲ! 200 ಸೀಟ್​ ಗೆದ್ದು ತೋರಿಸಲಿ… ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲ್

WhatsApp Image 2024-03-31 at 7.32.21 PM
Published on

ಪಶ್ಚಿಮ ಬಂಗಾಳ: ಲೋಕಸಭೆ ಚುನಾವಣೆ ಬಗ್ಗೆ ಮಾತನಾಡಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿ ಹೇಳಿರುವಂತೆ ಅವರು 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬೀಗಿದ್ದಾರೆ. ಆದರೆ, ಚಾಲೆಂಜ್ ಮಾಡ್ತೀನಿ ಕನಿಷ್ಠ 200 ಕ್ಷೇತ್ರಗಳನ್ನು ಗೆದ್ದು ತೋರಿಸಲಿ ನೋಡೋಣ ಎಂದು ಬಿಜೆಪಿಗರಿಗೆ ನೇರ ಸವಾಲು ಹಾಕಿದ್ದಾರೆ.

"ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದ ಮಮತಾ ಬ್ಯಾನರ್ಜಿ, ಸಿಎಎಗೆ ಅರ್ಜಿ ಸಲ್ಲಿಸುವುದರಿಂದ ಅರ್ಜಿದಾರರನ್ನು ವಿದೇಶಿಯನ್ನಾಗಿ ಪರಿವರ್ತಿಸುತ್ತದೆ ಎಂದು ಜನರಿಗೆ ಎಚ್ಚರಿಕೆ ನೀಡಿದರು. ಅರ್ಜಿ ಸಲ್ಲಿಸದಂತೆ ಒತ್ತಾಯಿಸಿದ ಸಿಎಂ, ಬಿಜೆಪಿಯವರು 400 ಸೀಟ್​ಗಳನ್ನು ಗೆಲ್ಲಲಿದ್ದೇವೆ ಅಂತಿದ್ದಾರೆ, ಮೊದಲು 200 ಕ್ಷೇತ್ರಗಳನ್ನು ಗೆಲ್ಲಲಿ ನೋಡೋಣ! ಇದು ಅವರಿಗೆ ನನ್ನ ನೇರ ಸವಾಲು" ಎಂದರು.

"2021ರ ವಿಧಾನಸಭಾ ಚುನಾವಣೆಯಲ್ಲಿ 200ಕ್ಕೂ ಅಧಿಕ ಸೀಟ್​ಗಳನ್ನು ಗೆಲ್ತೇವೆ ಎಂದಿದ್ದರು. ಆದ್ರೆ, ಗೆದ್ದಿದ್ದು ಮಾತ್ರ 77 ಎಂದು ವ್ಯಂಗ್ಯವಾಡಿರು. ಸಿಎಎ ಕಾನೂನು ನಾಗರಿಕರನ್ನು ವಿದೇಶಿಯರನ್ನಾಗಿ ಮಾಡಲು ಒಂದು ಬಲೆಯಾಗಿದೆ. ನಾವು ಪಶ್ಚಿಮ ಬಂಗಾಳದಲ್ಲಿ ಸಿಎಎ ಅಥವಾ ಎನ್‌ಆರ್‌ಸಿ ಈ ಎರಡನ್ನೂ ಅನುಮತಿಸುವುದಿಲ್ಲ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net