ಅಧಿಕಾರ ಇದ್ದಾಗೆಲ್ಲ ಬಿಎಸ್​​ವೈಗೆ ತೊಂದ್ರೆ ಕೊಟ್ರು, ಈಗ ಅಧಿಕಾರ ಬೇಕೆಂದಾದಾಗ ಅಡ್ಡಾಡಪ್ಪ ಅಂತಿದಾರೆ: ಅಬಕಾರಿ ಸಚಿವ

bsy
Published on

ಬಾಗಲಕೋಟೆ: ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ರಾಜ್ಯ ಪ್ರವಾಸ ಹಾಗೂ ಪಾದಯಾತ್ರೆ ಮಾಡುವುದಾಗಿ ಹೇಳಿರುವ ಮಾಜಿ ಮುಖ್ಯಮಂಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಅಬಕಾರಿ ಸಚಿವ ಏಕವಚನದಲ್ಲೇ ಮಾತನಾಡಿ ವಾಗ್ದಾಳಿ ನಡೆಸಿದ್ದಾರೆ. ‘

ಇಂದು ಬಾಗಲಕೋಟೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅಬಕಾರಿ ಸಚಿವ ಆರ್​.ಬಿ. ತಿಮ್ಮಾಪುರ ಮಾಜಿ ಸಿಎಂ ಬಿಎಸ್​ವೈ ಬಗ್ಗೆ ಏಕವಚನದಲ್ಲಿ ಮಾತನಾಡುತ್ತ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಾಪ ವಯಸ್ಸಾಗಿದೆ, ವಯಸ್ಸಿದ್ದಾಗ ಅಧಿಕಾರದಿಂದ ತೆಗೆದು ಹಾಕಿದ್ರು, ಈಗ ವಯಸ್ಸಾದ ಮೇಲೆ ನೀನು ಅಡ್ಡಾಡಪ್ಪ ಅಂತಿದ್ದಾರೆ ಎಂದು ತಿಮ್ಮಾಪುರ ಟೀಕಿಸಿದ್ದಾರೆ.

ಯಡಿಯೂರಪ್ಪ ಅವರು ಪಾಪ ಯಾವ ಕಾರಣಕ್ಕೆ ಪ್ರವಾಸ ಮಾಡ್ತಾರೋ ನನಗೆ ಗೊತ್ತಿಲ್ಲ. ಅಧಿಕಾರ ಇದ್ದಾಗೆಲ್ಲ ಅವನಿಗೆ ತೊಂದ್ರೆ ಕೊಟ್ರು. ಅಧಿಕಾರ ಬೇಕಾದಾಗೆಲ್ಲ ನೀ ನಡಿಯಪ್ಪ, ಅಡ್ಡಾಡಪ್ಪ ಅಂತ ತಳ್ಳುತ್ತಾರೆ. ವಯಸ್ಸಾದವರೇ ಇವರಿಗೆ (ಬಿಜೆಪಿ) ಬೇಕು. ಪಾಪ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಬಿಜೆಪಿಗೆ ಒಬ್ಬ ನಾಯಕ ಸಿಗುತ್ತಿಲ್ಲ ಎಂದು ತಿಮ್ಮಾಪುರ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net