ಹಿಟ್ಲರ್ ಯಹೂದಿಗಳನ್ನು ಆಚರಿಸಿದಷ್ಟೇ ಅವಾಸ್ತವಿಕ: ಅಯ್ಯಪ್ಪನ ಕಾರ್ಯಕ್ರಮಕ್ಕೆ ಸ್ಟಾಲಿನ್‌ಗೆ ಆಹ್ವಾನಿಸಿದ್ದಕ್ಕೆ ಕೇರಳ ಸರ್ಕಾರವನ್ನು ಟೀಕಿಸಿದ ಬಿಜೆಪಿ| BJP

Rajeev Chandrasekhar 25
Published on

BJP: ಮುಂದಿನ ತಿಂಗಳು ಪಟ್ಟಣಂತಿಟ್ಟದಲ್ಲಿ ನಡೆಯಲಿರುವ ಜಾಗತಿಕ ಅಯ್ಯಪ್ಪ ಸಂಗಮಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆಹ್ವಾನಿಸಿದ್ದಕ್ಕಾಗಿ ಕೇರಳ ಸರ್ಕಾರವನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.

ಈ ಬಗ್ಗೆ ಎಕ್ಸ್​ ಪೋಸ್ಟ್​ ಮಾಡಿರುವ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್, ಸಿಎಂ ಪಿಣರಾಯಿ ವಿಜಯನ್ ಶಬರಿಮಲೆ ಸಂಪ್ರದಾಯಗಳನ್ನು ಗೌರವಿಸದ ಮತ್ತು ಶಬರಿಮಲೆಗೆ ಬರುವ ಅನೇಕ ಭಕ್ತರನ್ನು ಜೈಲಿಗೆ ಹಾಕಿದ್ದಾರೆ. ತಮಿಳುನಾಡು ಮುಂಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಪುತ್ರ ಉದಯನಿಧಿಯು ಹಿಂದೂಗಳು ಮತ್ತು ಹಿಂದೂ ನಂಬಿಕೆಯನ್ನು ಟೀಕಿಸಿದ್ದಾರೆ. ಅಲ್ಲದೆ, ಈಗ ಚುನಾವಣೆಗೆ ಸ್ವಲ್ಪ ಮೊದಲು ಅಯ್ಯಪ್ಪ ಸ್ವಾಮಿಗೆ ಭಕ್ತಿ ತೋರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮುಂದುವರೆದು ಮಾತನಾಡಿದ ಚಂದ್ರಶೇಖರ್,ಇಂಡಿಯಾ ಮೈತ್ರಿಕೂಟದ ಪಕ್ಷಗಳಾದ ಕಾಂಗ್ರೆಸ್, ಸಿಪಿಐ(ಎಂ) ಮತ್ತು ಡಿಎಂಕೆ ಶಬರಿಮಲೆ ಕಾರ್ಯಕ್ರಮಕ್ಕೆ ಹೋಗುವುದು, ಹಿಟ್ಲರ್ ಯಹೂದಿಗಳನ್ನು ಇಷ್ಟಪಡುವುದು, ರಾಹುಲ್ ಗಾಂಧಿ ಸತ್ಯ ಹೇಳುವುದು, ಒಸಾಮಾ ಬಿನ್ ಲಾಡೆನ್ ಶಾಂತಿಯ ದೇವದೂತನಾಗುವುದು, ಹಮಾಸ್ ಮತ್ತು ಜಮಾತ್​ ಇಸ್ಲಾಮಿ ಬೇರೆ ಧರ್ಮದ ಜನರನ್ನು ಗೌರವಿಸುವುದು ಒಂದು ಭ್ರಮೆಯಾಗಿದೆ ಎಂದು ಹೇಳಿದ್ದಾರೆ.

ಅಲ್ಲದೆ, ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟಗಳು, ರಾಜವಂಶಗಳು ಭ್ರಷ್ಟಾಚಾರವನ್ನು ತ್ಯಜಿಸುವುದು ಹೇಗೆ ಎಂಬುದು ಕಾಂಗ್ರೆಸ್, ಸಿಪಿಐ(ಎಂ) ಮತ್ತು ಡಿಎಂಕೆಯಂತಹ ಭಾರತ ಮೈತ್ರಿಕೂಟದ ಪಕ್ಷಗಳು ಶಬರಿಮಲೆ ಕಾರ್ಯಕ್ರಮಕ್ಕೆ ಹೋಗುವುದು ಅವಾಸ್ತವ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬರೆದುಕೊಂಡಿದ್ದಾರೆ.

ಆದರೆ, ಜನರು ಇನ್ನು ಮುಂದೆ ಮೂರ್ಖರಾಗುವುದಿಲ್ಲ. INDI ಮೈತ್ರಿಕೂಟವು ಹಿಂದೂ ಭಕ್ತರಿಗೆ ಏನು ಹೇಳಿದೆ ಮತ್ತು ಏನು ಮಾಡಿದೆ ಎಂಬುದನ್ನು ಯಾರೂ ಮರೆಯುವುದಿಲ್ಲ ಎಂದು ರಾಜೀವ್​ ಚಂದ್ರಶೇಖರ್​ ಹೇಳಿದ್ದಾರೆ.

ದೇವಸ್ವಂ ಸಚಿವ ವಿ.ಎನ್. ವಾಸವನ್ ಅವರು ಚೆನ್ನೈನಲ್ಲಿ ಸ್ಟಾಲಿನ್ ಅವರನ್ನು ಭೇಟಿಯಾಗಿ, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮತ್ತು ಕೇರಳ ಸರ್ಕಾರ ಸೆಪ್ಟೆಂಬರ್ 20 ರಂದು ಪಂಪಾದಲ್ಲಿ ಆಯೋಜಿಸಲಿರುವ ಜಾಗತಿಕ ಅಯ್ಯಪ್ಪ ಸಂಗಮಕ್ಕೆ ಆಹ್ವಾನಿಸಿದ ಒಂದು ದಿನದ ನಂತರ ಈ ಹೇಳಿಕೆ ಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net