

PM Modi Degree: ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಪದವಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸುವಂತಿಲ್ಲ ಎಂದು ಸೋಮವಾರ (ಆಗಸ್ಟ್ 25) ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ಜೊತೆಗೆ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಗೆ ಪ್ರತಿಕ್ರಿಯೆಯಾಗಿ ಪ್ರಧಾನಿ ನರೇಂದ್ರ ಮೋದಿಯವರ ಪದವಿಯ ವಿವರಗಳನ್ನು ಬಹಿರಂಗಪಡಿಸುವಂತೆ ಮುಖ್ಯ ಮಾಹಿತಿ ಆಯೋಗ ದೆಹಲಿ ವಿಶ್ವವಿದ್ಯಾಲಯಕ್ಕೆ ನೀಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ತಡೆಹಿಡಿದಿದೆ.
ಈ ಕುರಿತು ಹಿಂದೆ ವಿಚಾರಣೆ ನಡೆಸಿ, ಇಂದು ತೀರ್ಪು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ಸಚಿನ್ ದತ್ತಾ, ಪ್ರಧಾನ ಮಂತ್ರಿಯವರ ಶೈಕ್ಷಣಿಕ ದಾಖಲೆ ಮತ್ತು ಪದವಿ (ಪಿಟಿಐ) ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುವ ಅಗತ್ಯವಿಲ್ಲ. ಆದಾಗ್ಯೂ ಈ ವಿಷಯದ ಬಗ್ಗೆ ಎರಡೂ ಪಕ್ಷಗಳು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಬಹುದು ಹೇಳಿದ್ದಾರೆ.
ಮೋದಿಯವರ ಶೈಕ್ಷಣಿಕ ದಾಖಲೆಗಳ ಬಹಿರಂಗಪಡಿಸುವಿಕೆಯ ಕುರಿತಾದ ಕಾನೂನು ಹೋರಾಟ ಅವರು ಪ್ರಧಾನಿ ಆಗಿದ್ದಾಗಿನಿಂದ ನಡೆಯುತ್ತಿದೆ. ವಾಸ್ತವವಾಗಿ ಮೋದಿ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ 1978 ರಲ್ಲಿ ಡಿಯು (ದೆಹಲಿ ವಿಶ್ವವಿದ್ಯಾಲಯ) ದಿಂದ ಬಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಾಗಿ ತೋರಿಸಿದ್ದರು.
ಈ ವಿಷಯವು 2016 ರಲ್ಲಿ ಮೋದಿಯವರ ಶೈಕ್ಷಣಿಕ ದಾಖಲೆಗಳಿಗಾಗಿ ಸಲ್ಲಿಸಲಾದ ಆರ್‌ಟಿಐ ಅರ್ಜಿಯೊಂದಿಗೆ ವಿವಾದ ಪ್ರಾರಂಭಾಗಿತ್ತು. ಮೂರನೇ ವ್ಯಕ್ತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂಬ ನಿಯಮಗಳನ್ನು ಉಲ್ಲೇಖಿಸಿ ವಿಶ್ವವಿದ್ಯಾಲಯವು ಮಾಹಿತಿ ನಿಡೋದನ್ನು ತಿರಸ್ಕರಿಸಿತ್ತು. ಆದಾಗ್ಯೂ ಕೇಂದ್ರ ಮಾಹಿತಿ ಆಯೋಗ ಈ ವಾದವನ್ನು ಸ್ವೀಕರಿಸಲಿಲ್ಲ. ಡಿಸೆಂಬರ್ 2016 ರಲ್ಲಿ ಅದು ಡಿಯು ತಪಾಸಣೆಗೆ ಅವಕಾಶ ನೀಡುವಂತೆ ಆದೇಶಿಸಿತ್ತು.
ಸಾರ್ವಜನಿಕ ಪ್ರತಿನಿಧಿಯ ವಿಶೇಷವಾಗಿ ಪ್ರಧಾನ ಮಂತ್ರಿಯ ಶೈಕ್ಷಣಿಕ ಅರ್ಹತೆಗಳು ಪಾರದರ್ಶಕವಾಗಿರಬೇಕು ಎಂಬ ಆದೇಶವನ್ನು ಸಿಐಸಿಯ ಆದೇಶವು ಎತ್ತಿಹಿಡಿದಿದೆ. ಈ ಮಾಹಿತಿಯನ್ನು ಒಳಗೊಂಡಿರುವ ರಿಜಿಸ್ಟರ್ ಅನ್ನು ಸಾರ್ವಜನಿಕ ದಾಖಲೆಯಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದೆ. ದೆಹಲಿ ವಿಶ್ವವಿದ್ಯಾಲಯವು ಈ ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. (ಏಜೆನ್ಸೀಸ್)