ರಾಜ್ಯದಲ್ಲಿ ಶಾಂತಿ, ನೆಮ್ಮದಿ ಇಳಿಕೆ, ಜನಸಾಮಾನ್ಯರ ಆತಂಕ ಏರಿಕೆ!; ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕೆ

bjp tweet
Published on

ಬೆಂಗಳೂರು: ರಾಜ್ಯ ಸರ್ಕಾರ(State Government) ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳ ಕುರಿತು ಬಿಜೆಪಿ(BJP) ಟ್ವೀಟ್ ಮಾಡಿದ್ದು, ಸಿಎಂ ಸಿದ್ದರಾಮಯ್ಯ(Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿ ಟೀಕಿಸಿದೆ.

"ಧನದಾಹಿ ಎಟಿಎಂ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಗ್ಯಾರಂಟಿ ಕೊಡುಗೆಗಳು. ಉಚಿತ, ಖಚಿತ, ನಿಶ್ಚಿತ" ಎಂದು ಟ್ವೀಟ್​ನಲ್ಲಿ(Tweet) ಉಲ್ಲೇಖಿಸಿದೆ.

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡಿರುವ ಬಿಜೆಪಿ, "1ನೇ ಗ್ಯಾರಂಟಿ - ವಿದ್ಯುತ್, ಮೀಟರ್ ದರ ಏರಿಕೆ, 2ನೇ ಗ್ಯಾರಂಟಿ - ಕುಡಿಯುವ ನೀರಿನ ಬೆಲೆ ಏರಿಕೆ, 3ನೇ ಗ್ಯಾರಂಟಿ - ಸದ್ದಿಲ್ಲದೆ ಕೆಎಸ್​ಆರ್​ಟಿಸಿ ಟಿಕೆಟ್ ದರ ಏರಿಕೆ, 4ನೇ ಗ್ಯಾರಂಟಿ - ಮದ್ಯಪಾನದ ಬೆಲೆಯೂ ಏರಿಕೆ, 5ನೇ ಗ್ಯಾರಂಟಿ - ನಂದಿನಿ ಹಾಲಿನ ದರವೂ ಏರಿಕೆ, 6ನೇ ಗ್ಯಾರಂಟಿ - ಆಸ್ತಿ ನೋಂದಣಿ ಶುಲ್ಕ ಏರಿಕೆ, 7ನೇ ಗ್ಯಾರಂಟಿ - ಮೊಟ್ಟೆ, ಮಾಂಸದ ದರವೂ ಏರಿಕೆ" ಎಂದು ಟ್ವೀಟ್​ ಮಾಡಿದೆ.

"ಕರ್ನಾಟಕದಲ್ಲಿ ಶಾಂತಿ ನೆಮ್ಮದಿ ಇಳಿಕೆ, ಜನಸಾಮಾನ್ಯರ ಆತಂಕ ಏರಿಕೆ!" ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್(Congress) ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net