ಬಿಜೆಪಿ ಎರಡನೇ ಪಟ್ಟಿಯಲ್ಲೂ ಮತ್ತಷ್ಟು ಅಚ್ಚರಿ! ಈಶ್ವರಪ್ಪ, ಶೆಟ್ಟರ್​ ಕ್ಷೇತ್ರ ಇನ್ನೂ ಸಸ್ಪೆನ್ಸ್

BJP
Published on

ಬೆಂಗಳೂರು: ಬಿಜೆಪಿ 23 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕಾಂಗ್ರೆಸ್​ನಿಂದ ವಲಸೆ ಬಂದಿದ್ದ ನಾಗರಾಜ ಛಬ್ಬಿ ಅವರಿಗೆ ಕಲಟಗಿಯಲ್ಲಿ ಮಣೆ ಹಾಕಿದೆ. ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ ಹಾವೇರಿಯ ನೆಹರೂ ಓಲೇಕಾರ್​ ಹಾಗೂ ಮೂಡಿಗೆರೆಯ ಎಂ.ಪಿ. ಕುಮಾರಸ್ವಾಮಿ ಅವರಿಗೆ ಟಿಕೆಟ್​ ನಿರಾಕರಿಸಿದೆ.

ಚನ್ನಗಿರಿಯಲ್ಲಿ ಕಳಂಕಿತ ಮಾಡಾಳ್​ ವಿರುಪಾಕ್ಷಪ್ಪ ಬದಲು ಶಿವಕುಮಾರ್​ಗೆ ಹಾಗೂ ಬೈಂದೂರಿನಲ್ಲಿ ಸುಕುಮಾರ್​ ಶೆಟ್ಟಿ ಬದಲು ಗುರುರಾಜ್​ ಗಂಟಿಹೊಳೆ ಟಿಕೆಟ್​ ನೀಡಲಾಗಿದೆ. ಕಲಟಗಿಯಲ್ಲೂ ಛಬ್ಬಿಗೆ ಟಿಕೆಟ್​ ನೀಡಿದ್ದರಿಂದ ಹಾಲಿ ಶಾಸಕ ನಿಂಬಣ್ಣವರ್​ಗೆ ಟಿಕೆಟ್​ ಕೈತಪ್ಪಿದೆ. ಮಾಯಕೊಂಡದಲ್ಲಿ ಶಾಸಕ ನಿಂಗಣ್ಣ ಬದಲು ಬಸವರಾಜ ನಾಯ್ಕ್​ ಅವಕಾಶ ಪಡೆದುಕೊಂಡಿದ್ದಾರೆ. ದಾವಣಗೆರೆ ಉತ್ತರದಲ್ಲಿ ರವೀಂದ್ರನಾಥ ರಾಜಕೀಯ ನಿವೃತ್ತಿ ಘೋಷಿಸಿದ್ದರಿಂದ ಲೋಕಿಕೆರೆ ನಾಗರಾಜ್​ ಅವಕಾಶ ಪಡೆದಿದ್ದಾರೆ.

ಬಿಜೆಪಿ ಮಂಗಳವಾರ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಜಗದೀಶ್​ ಶೆಟ್ಟರ್​ ಪ್ರತಿನಿಧಿಸುವ ಹುಬ್ಬಳ್ಳಿ-ಧಾರವಾಡ, ಕೆ.ಎಸ್​. ಈಶ್ವರಪ್ಪ- ಶಿವಮೊಗ್ಗ, ಅರವಿಂದ ಲಿಂಬಾವಳಿ ಅವರ ಮಹಾದೇವಪುರ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಇನ್ನೂ 13 ಕ್ಷೇತ್ರಗಳಿಗೆ ಪ್ರಕಟಿಸುವುದು ಬಾಕಿ ಇದೆ.

ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಸಂಬಂಧಿ ಸಂತೋಷ್​ ಅರಸೀಕೆರೆಯಿಂದ ಆಕಾಂಯಾಗಿದ್ದರು. ಆದರೆ ಟಿಕೆಟ್​ ನಿರಾಕರಿಸುವ ಮೂಲಕ ಶಾಕ್​ ನೀಡಿದೆ. ಅರಸೀಕೆರೆಗೆ ಜಿವಿ ಬಸವರಾಜು ಅವರಿಗೆ ಟಿಕೆಟ್​ ನೀಡಲಾಗಿದೆ. ಮಾಜಿ ಸಚಿವ ಎಸ್​.ಕೆ. ಬೆಳ್ಳುಬ್ಬಿ ಅವರಿಗೆ ಬಸವನ ಬಾಗೇವಾಡಿಯಿಂದ ಟಿಕೆಟ್​ ನೀಡಲಾಗಿದೆ. ಹರಪ್ಪನಹಳ್ಳಿಯಿಂದ ಮಾಜಿ ಸಚಿವ ಕರುಣಾಕರ ರೆಡ್ಡಿ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಕೆಜಿಎ್​ನಲ್ಲಿ ಮಾಜಿ ಶಾಸಕ ಸಂಪಂಗಿ ಅವರ ಪತ್ನಿ ಅಶ್ವಿನಿಗೆ ಅವಕಾಶ ನೀಡಲಾಗಿದೆ.

ಬಿಜೆಪಿ ಎರಡನೇ ಪಟ್ಟಿ

ದೇವರ ಹಿಪ್ಪರಗಿ- ಸೋಮನಗೌಡ ಪಾಟೀಲ್​
ಬಸವನಬಾಗೇವಾಡಿ- ಎಸ್​.ಕೆ.ಬೆಳ್ಳುಬ್ಬಿ
ಇಂಡಿ- ಕೆ.ಬಿರಾದಾರ್​
ಗುರುಮಿಟ್ಕಲ್​- ಲಲಿತಾ ಅನಾಪುರ್​
ಬೀದರ್​- ಈಶ್ವರ್​ ಸಿಂಗ್​ ಠಾಕೂರ್​
ಭಾಲ್ಕಿ- ಪ್ರಕಾಶ್​ ಖಂಡ್ರೆ
ಗಂಗಾವತಿ- ಪರಣ್ಣ ಮುನವಳ್ಳಿ
ಕಲಟಗಿ- ನಾಗರಾಜ ಛಬ್ಬಿ
ಹಾನಗಲ್​- ಶಿವರಾಜ್​ ಸಜ್ಜನರ್​
ಹಾವೇರಿ- ಗವಿಸಿದ್ದಪ್ಪ ದ್ಯಾಮಣ್ಣವರ್​
ಹರಪನಹಳ್ಳಿ- ಕರುಣಾಕರ ರೆಡ್ಡಿ
ದಾವಣಗೆರೆ ಉತ್ತರ- ಲೋಕೀಕೆರೆ ನಾಗರಾಜ್​
ದಾವಣಗೆರೆ ದಣ- ಅಜಯ್​ ಕುಮಾರ್​
ಮಾಯಕೊಂಡ- ಬಸವರಾಜ ನಾಯಕ್​
ಚನ್ನಗಿರಿ- ಶಿವಕುಮಾರ್​
ಬೈಂದೂರು- ಗುರುರಾಜ್​ ಗಂಟಿಹೊಳೆ
ಮೂಡಿಗೆರೆ- ದೀಪಕ್​ ದೊಡ್ಡಯ್ಯ
ಗುಬ್ಬಿ- ಎಸ್​.ಡಿ.ದಿಲೀಪ್​ ಕುಮಾರ್​
ಶಿಡ್ಲಟ್ಟ- ರಾಮಚಂದ್ರ ಗೌಡ
ಕೋಲಾರ ಗೋಲ್ಡ್​ ಫಿಲ್ಡ್ಡ್​- ಅಶ್ವಿನಿ ಸಂಪಂಗಿ
ಶ್ರವಣಬೆಳಗೊಳ- ಚಿದಾನಂದ
ಅರಸೀಕೆರೆ- ಜಿ.ವಿ.ಬಸವರಾಜು
ಹೆಗ್ಗಡದೇವನಕೋಟೆ- ಕೃಷ್ಣಾ ನಾಯ್ಕ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net