More

    ನಾಳೆ ಜೆಡಿಎಸ್‌ ಎರಡನೇ ಪಟ್ಟಿ ಬಿಡುಗಡೆ ಆಗುತ್ತಾ?

    ಬೆಂಗಳೂರು: ನಿನ್ನೆ ರಾತ್ರಿ (ಏ.12) ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಮತ್ತೊಮ್ಮೆ ಸಂಚಲನವನ್ನು ಸೃಷ್ಟಿಸಿತ್ತು. ಇದೀಗ ಜೆಡಿಎಸ್‌​ ಕೂಡ ಸುಮಾರು ನಾಳೆ 40 ಮಂದಿಯ ಅಭ್ಯರ್ಥಿ ಪಟ್ಟಿ ಬಿಡುಗಡೆಗೊಳಿಸಲು ತೀರ್ಮಾನ ಮಾಡಿದೆ ಎಂದು ಹೇಳಲಾಗಿದೆ.

    ಹಾಸನದಲ್ಲಿ ಜೆಡಿಎಸ್‌ ಅಭ್ಯರ್ಥಿ ಯಾರು?

    ಹಿಂದೆ ಜೆಡಿಎಸ್​ ಹಾಸನ ಕ್ಷೇತ್ರದ ಗೊಂದಲ ಹಾಗೂ ಬಿಜೆಪಿ ಪಟ್ಟಿ ಬಿಡುಗಡೆಗಾಗಿ ಕಾಯುತ್ತಿತ್ತು. ಪಕ್ಷದ ಕಚೇರಿಯಲ್ಲಿ ಪಟ್ಟಿ ಬಿಡುಗಡೆ ಮಾಡಲಿರುವ ಕುಮಾರ ಸ್ವಾಮಿ. ಇದೀಗ ಬಿಜೆಪಿ ಕೂಡ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು ಜೆಡಿಎಸ್​ ಕೂಡ ಬಿಡುಗಡೆ ಮಾಡಲು ಮುಂದಾಗಿದೆ ಎನ್ನಲಾಗಿದೆ. ಎರಡನೇ ಪಟ್ಟಿಯಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿ ಯಾರು ಎಂದು ಘೋಷಣೆ ಆಗುತ್ತಾರಾ ಎನ್ನುವ ವಿಚಾರವೂ ಮುನ್ನೆಲೆಗೆ ಬಂದಿದ್ದು ರೇವಣ್ಣ ಹಾಗೂ ಕುಮಾರಸ್ವಾಮಿ ನಡುವೆ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿದೆ.

    ದೇವೇಗೌಡರ ನಿಲುವು ಯಾರ ಪರ?

    ಹಾಸನದ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದ್ದು ದೇವೆಗೌಡರ ನಿಲುವು ಯಾರ ಪರ ಇರಲಿದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ದೇವೇಗೌಡರು ಕಾರ್ಯಕರ್ತನಿಗೆ ಟಿಕೆಟ್ ನೀಡ್ತಾರಾ, ಅಥವಾ ಕುಟುಂಬಸ್ಥರಿಗೆ ಮಣೆ ಹಾಕ್ತಾರಾ ಎನ್ನುವ ಪ್ರಶ್ನೆಯ ಮೇಲೆ ಜೆಡಿಎಸ್​ ಒಳಗಿನ ಬಂಡಾಯದ ಧ್ವನಿ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎನ್ನುವುದನ್ನು ಕಾದು ನೋಡಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts