ಪ್ರಿಯಾಂಕ್ ವಿರುದ್ಧ ಹೋರಾಟ ಬಿಜೆಪಿಗೆ ನೈತಿಕತೆ ಇಲ್ಲ :ಸಚಿವ ಭೈರತಿ ಸುರೇಶ ತಿರುಗೇಟು

Bairati Suresh
Published on

ಪಾಂಚಾಳ್ ಆತ್ಮಹತ್ಯೆ : ಯಾವ ಆಧಾರದ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ 

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಪಾಂಚಾಳ್ ಆತ್ಮಹತ್ಯೆಗೆ ಸಂಬAಧಿಸಿದAತೆ ಹೋರಾಟ ಮಾಡುತ್ತಿರುವ ಬಿಜೆಪಿಯವರಿಗೆ ನೈತಿಕತೆಯಿಲ್ಲ. ಯಾವ ಆಧಾರದ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ನಗರಾಭಿವೃದ್ದಿ ಸಚಿವ ಭೈರತಿ ಸುರೇಶ ಹೇಳಿದರು.

ಕಲಬುರಗಿಯಲ್ಲಿ ಶುಕ್ರವಾರ ನಡೆದ ಇಲಾಖಾ ಪ್ರಗತಿ ಪರಿಶೀಲನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ ನಿವಾಸಕ್ಕೆ ಬಿಜೆಪಿ ಮುಖಂಡರು ಮುತ್ತಿಗೆ ಹಾಕುತ್ತಾರಂತೆ. ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಖುದ್ದು ಪ್ರಿಯಾಂಕ್ ಅವರೇ ದಾಖಲೆ ಏನಾದರೂ ಇದ್ದರೆ ಕೊಡಿ ಎಂದು ಕೇಳಿದ್ದಾರೆ. ಈವರೆಗೂ ಒಂದು ಸಿಂಗಲ್ ದಾಖಲೆ ಒದಗಿಸಲು ಅವರಿಂದ ಸಾಧ್ಯವಾಗಿಲ್ಲ. ಕೇವಲ ಪ್ರಿಯಾಂಕ್ ಟಾರ್ಗೆಟ್ ಮಾಡಿ ಹೋರಾಟ ಮಾಡುತ್ತಿದ್ದಾರೆ. ಪ್ರತಿಯೊಂದರಲ್ಲೂ ರಾಜಕೀಯ ಬೆರೆಸುತ್ತಿದ್ದಾರೆ ಎಂದು ದೂರಿದರು.

ಕೆ.ಎಸ್.ಈಶ್ವರಪ್ಪ ಕೇಸ್ ಬೇರೆ ಈ ಕೇಸ್ ಬೇರೆ. ಅಲ್ಲಿ ಖುದ್ದು ಈಶ್ವರಪ್ಪನವರ ಹೆಸರೇ ಬರೆದಿಟ್ಟಿದ್ದರು. ಈ ಕೇಸ್‌ನಲ್ಲಿ ಎಲ್ಲೂ ಯಾವ ದಾಖಲೆಯೂ ಇಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಬಸ್ ಟಿಕೆಟ್ ದರ ಏರಿಕೆ

ಬಸ್ ಟಿಕೆಟ್ ದರ ಏರಿಕೆಗೆ ಸಂಬAಧಿಸಿದAತೆ ಮಾತನಾಡಿದ ಸಚಿವ ಸುರೇಶ, ಬಸ್ ಟಿಕೆಟ್ ದರ ಹಿಂದೆ ಯಾವುತ್ತೂ ಏರಿಕೆಯಾಗಿಲ್ಲವಾ ? ಕಾಲ ಕಾಲಕ್ಕೆ ಪೆಟ್ರೋಲï, ಡಿಸೇಲï ದರ ಏರಿಕೆ ಆಗುತ್ತದೆ. ಆ ಪ್ರಕಾರ ಬಸ್ ಟಿಕೆಟ್ ದರದಲ್ಲೂ ಏರಿಕೆಯಾಗುತ್ತದೆ. ಇದಕ್ಕೂ ಗ್ಯಾರಂಟಿ ಯೋಜನೆಗೂ ಸಂಬAಧವಿಲ್ಲ. ಟಿಕೆಟ್ ದರದಿಂದ ೪೦೦-೫೦೦ ಕೋಟಿ ರೂ. ಬರುತ್ತದೆ. ಆದರೆ ನಾವು ಗ್ಯಾರೆಂಟಿ ಯೋಜನೆಗೆ ೬೦ ಸಾವಿರ ಕೋಟಿ ಖರ್ಚು ಮಾಡುತ್ತಿz್ದÉÃವೆ. ಅದಕ್ಕೂ ಇದಕ್ಕೂ ಹೋಲಿಕೆ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಜಗದೇವ ಗುತ್ತೇದಾರ್, ಕುಡಾ ಅಧ್ಯಕ್ಷ ಮಜರ್ ಆಲಂಖಾನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net