ಅಗ್ನಿವೀರರಿಗೆ ಮನೆ, ಗೃಹಿಣಿಯರಿಗೆ 500ರೂ.ಗೇ ಸಿಲಿಂಡರ್..ಹರಿಯಾಣದಲ್ಲಿ ಬಿಜೆಪಿ ಆಶ್ವಾಸನೆ!

nadda
Published on

ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪಕ್ಷದ 'ಸಂಕಲ್ಪ ಪತ್ರ' (ಪ್ರಣಾಳಿಕೆ)ಯನ್ನು ರೋಹ್ಟಕ್‌ನಲ್ಲಿ ಬಿಡುಗಡೆ ಮಾಡಿದ್ದಾರೆ.

ಬಿಜೆಪಿಯು ಅಗ್ನಿವೀರ್ ಮತ್ತು ವಂಚಿತ ಸಮುದಾಯಗಳತ್ತ ವಿಶೇಷ ಗಮನ ಹರಿಸಿದೆ. ಬಿಜೆಪಿ ಸಾರ್ವಜನಿಕರಿಗೆ 20 ಭರವಸೆಗಳನ್ನು ನೀಡಿದೆ. ಲಾಡೋ ಲಕ್ಷ್ಮೀ ಯೋಜನೆಯಡಿ ಎಲ್ಲಾ ಮಹಿಳೆಯರಿಗೆ ಮಾಸಿಕ 2100 ರೂ., ಐಎಂಟಿ ಖಾರ್ಖೋಡಾ ಮಾದರಿಯಲ್ಲಿ 10 ಕೈಗಾರಿಕಾ ನಗರಗಳ ಸ್ಥಾಪನೆ, ಪ್ರತಿ ನಗರದಲ್ಲಿ 50ಸಾವಿರ ಸ್ಥಳೀಯ ಯುವಕರಿಗೆ ಉದ್ಯೋಗ, ಚಿರಾಯು-ಆಯುಷ್ಮಾನ್ ಯೋಜನೆಯಡಿ ಪ್ರತಿ ಕುಟುಂಬಕ್ಕೆ 10 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, 70 ವರ್ಷ ಮೇಲ್ಪಟ್ಟ ವೃದ್ಧರಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, ಕನಿಷ್ಠ ಬೆಂಬಲ ಬೆಲೆಯಲ್ಲಿ 24 ಬೆಳೆಗಳ ಖರೀದಿಯ ಖಾತರಿ, 2 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ, 5 ಲಕ್ಷ ಮನೆಗಳು, ಗೃಹಿಣಿ ಯೋಜನೆಯಡಿ 500 ರೂ.ಗೆ ಸಿಲಿಂಡರ್, ಆವಲ್ ಬಾಲಿಕಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಕಾಲೇಜು ಹೆಣ್ಣುಮಕ್ಕಳಿಗೆ ಸ್ಕೂಟರ್, ಅಗ್ನಿವೀರರಿಗೆ ಸರ್ಕಾರಿ ಉದ್ಯೋಗದ ಭರವಸೆ ಸೇರಿದಂತೆ ಹಲವು ಭರವಸೆಗಳನ್ನು ನೀಡಲಾಗಿದೆ.

ಕಾಂಗ್ರೆಸ್ ನೀಡಿದ 7 ಗ್ಯಾರಂಟಿಗಳನ್ನು ಬಿಜೆಪಿ ಟಾರ್ಗೆಟ್ ಮಾಡಿರುವುದು ಕಂಡುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net