ಮುಂಬೈ: ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಸಂದರ್ಭ ಬಂದಾಗಲೆಲ್ಲಾ ತಮ್ಮ ಸೊಸೆ ಐಶ್ವರ್ಯಾ ರೈ ಮೇಲಿನ ಪ್ರೀತಿಯ ಬಗ್ಗೆ ಮಾತನಾಡುತ್ತಾರೆ. ಇತ್ತೀಚೆಗೆ ಮತ್ತೊಮ್ಮೆ ಐಶ್ವರ್ಯಾ ಬಗ್ಗೆ ಮಾತನಾಡಿದ್ದಾರೆ. ‘ಖಾಕಿ’ ಚಿತ್ರದ ಸೆಟ್‌ನಲ್ಲಿ ಆಕೆಗೆ ಗಾಯವಾದಾಗ ನೋವಿನಿಂದ ಬಳಲಿದ್ದು, ನಾನು ಸಹ ಎರಡು ದಿನ ಸರಿಯಾಗಿ ನಿದ್ದೆ ಮಾಡಲಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ಎರಡು ಪೆಗ್ ಹಾಕಿದ್ರೆ ಡೋಂಟ್ ಕೇರ್.. ಹಾವಿಗೇ ಶಾಕ್ ಕೊಟ್ಟ ಕುಡುಕ!
ಈ ಬಗ್ಗೆ ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ರೆಡ್ಡಿಟ್‌ನಲ್ಲಿ ವಿವರಿಸಿರುವ ಅವರು, 2003ರಲ್ಲಿ ನಾಸಿಕ್‌ನಲ್ಲಿ ನಡೆದ ‘ಖಾಕಿ’ ಶೂಟಿಂಗ್ ಅಪಘಾತವನ್ನು ಮರೆಯಲು ಸಾಧ್ಯವಿಲ್ಲ. ಕಾರು ನಿಯಂತ್ರಣ ತಪ್ಪಿ ಐಶ್ವರ್ಯ ರೈ ಕುಳಿತಿದ್ದ ಕುರ್ಚಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಆಕೆ ತೀವ್ರವಾಗಿ ಗಾಯಗೊಂಡಿದ್ದರಿಂದ ಆಕೆಯನ್ನು ಮುಂಬೈಗೆ ಕರೆದೊಯ್ಯಲು ಬಯಸಿದ್ದೆವು. ಕೂಡಲೇ ಐಶ್ವರ್ಯಾಳನ್ನು ಅನಿಲ್ ಅಂಬಾನಿ ಅವರ ಖಾಸಗಿ ವಿಮಾನದಲ್ಲಿ ಕರೆದುಕೊಂಡು ಹೋದೆವು. ನಾಸಿಕ್‌ನಲ್ಲಿ ರಾತ್ರಿ ಲ್ಯಾಂಡಿಂಗ್ ಸೌಲಭ್ಯವಿಲ್ಲದ ಕಾರಣ ಅಲ್ಲಿಂದ ಸ್ವಲ್ಪ ದೂರದಲ್ಲಿರುವ ಸೇನಾ ನೆಲೆಯಲ್ಲಿ ವಿಮಾನವನ್ನು ಇಳಿಸಲು ದೆಹಲಿಯಿಂದ ಅನುಮತಿ ಪಡೆದೆವು. ಆದರೆ ಅದೊಂದು ಸಣ್ಣ ಘಟನೆ ಎಂದು ಎಲ್ಲರೂ ತಳ್ಳಿ ಹಾಕಿದ್ದಾರೆ. ಅವಳ ಗಾಯಗಳನ್ನು ನೋಡಿ ನನ್ನ ಹೃದಯ ಒಡೆದುಹೋಯಿತು. ಎರಡು ದಿನ ನಿದ್ದೆ ಬರಲಿಲ್ಲ ಎಂದು ತಿಳಿಸಿದ್ದಾರೆ.
ಐಶ್ವರ್ಯಾ ಬೆನ್ನು ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು. ಆಕೆಯ ಪಾದದ ಹಿಂಭಾಗದಲ್ಲಿ ಮೂಳೆ ಮುರಿದಿತ್ತು. ಕಣ್ಣೆದುರೇ ನಡೆದ ಆ ಘಟನೆ ಮರೆಯಲು ಹಲವು ದಿನಗಳು ಬೇಕಾಯಿತು ಎಂದು ಅಮಿತಾಭ್ ಭಾವುಕರಾಗಿ ಹೇಳಿದ್ದಾರೆ.
ಐಶ್ವರ್ಯಾ 2007ರಲ್ಲಿ ಅಮಿತಾಭ್ ಪುತ್ರ ಅಭಿಷೇಕ್ ಅವರನ್ನು ವಿವಾಹವಾದರು. ಅವರಿಗೆ ಆರಾಧ್ಯ ಪುತ್ರಿಯಿದ್ದಾಳೆ.
‘ಐದು ನೂರು ರೂ.ಗೆ ಗ್ಯಾಸ್ ಸಿಲಿಂಡರ್, ಉಚಿತ ವಿದ್ಯುತ್’: ಹರಿಯಾಣ ಚುನಾವಣೆಗೆ ‘ಕೈ’ ಗ್ಯಾರಂಟಿ!