

ಕೊಪ್ಪಳ: ಬಿಜೆಪಿ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದಾಗ ಸಂಭವಿಸಿದ್ದ ಬೆಳವಣಿಗೆ ಮೂರನೇ ಪಟ್ಟಿ ಬಿಡುಗಡೆ ಸಂದರ್ಭದಲ್ಲೂ ಉಂಟಾಗಿದ್ದು, ಪಕ್ಷದ ಇನ್ನೊಬ್ಬ ನಾಯಕ ಸದ್ಯದಲ್ಲೇ ರಾಜೀನಾಮೆ ನೀಡುವ ನಿರ್ಧಾರ ಘೋಷಿಸಿದ್ದಾರೆ.
ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ನ ಪ್ರಬಲ ಆಕಾಂಕ್ಷಿ ಆಗಿರುವ ಸಿ.ವಿ.ಚಂದ್ರಶೇಖರ್, ಇದೀಗ ಟಿಕೆಟ್ ಸಿಗದ್ದರಿಂದ ಬೇಸರಗೊಂಡು ಪಕ್ಷಕ್ಕೆ ರಾಜೀನಾಮೆ ನೀಡಲಿರುವುದಾಗಿ ಹೇಳಿದ್ದಾರೆ. ಸಂಸದ ಕರಡಿ ಸಂಗಣ್ಣನ ಸೊಸೆ ಮಂಜುಳಾ ಅಮರೇಶ್ ಕರಡಿಗೆ ಈ ಕ್ಷೇತ್ರದ ಟಿಕೆಟ್ ಸಿಕ್ಕಿದೆ.
ತಾನು ನಿರೀಕ್ಷೆ ಮಾಡಿದ್ದ ಟಿಕೆಟ್ ತಪ್ಪಿ ಹೋಗಿದ್ದರಿಂದ ತೀವ್ರ ಮನನೊಂದಿರುವ ಚಂದ್ರಶೇಖರ್, ಪಕ್ಷಕ್ಕೆ ರಾಜೀನಾಮೆ ನೀಡಲು ಬೆಂಗಳೂರಿಗೆ ಹೊರಟಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ದರೂ ಈ ಸಲದ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದಿರುವ ಅವರು, ರಾಜೀನಾಮೆ ನೀಡಿದ ಬಳಿಕ ಮುಂದಿನ ತೀರ್ಮಾನ ತಿಳಿಸುವುದಾಗಿ ಹೇಳಿದ್ದಾರೆ.