ಬಿಜೆಪಿ ಮುಖಂಡನ ಪುತ್ರಿ-ಮುಸ್ಲಿಂ ಯುವಕನ ವಿವಾಹ ರದ್ದು

marriage
Published on

ಉತ್ತರಾಖಾಂಡ್​: ಇತ್ತೀಚಿಗಷ್ಟೇ ಬಿಜೆಪಿ ಮುಖಂಡನ ಮಗಳು ಹಾಗೂ ಮುಸ್ಲಿಂ ಯುವಕನ ಮದುವೆ ಕುರಿತ ಹಲವಾರು ಸುದ್ದಿಗಳು ಎಲ್ಲೆಡೆ ವೈರಲ್​​​ ಆಗಿತ್ತು. ಇದಕ್ಕೆ ಭಾರೀ ಟೀಕೆ ಎದುರಾಗಿರುವ ಹಿನ್ನೆಲೆಯಲ್ಲಿ ಮೇ 28 ರಂದು ನಡೆಯಬೇಕಿದ್ದ ತನ್ನ ಮಗಳ ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದು ಬಿಜೆಪಿ ಮುಖಂಡ ತಿಳಿಸಿದ್ದಾರೆ.

ವಧುವಿನ ತಂದೆ ಹಾಗೂ ಪೌರಿ ಪುರಸಭೆ ಅಧ್ಯಕ್ಷನಾಗಿರುವ ಯಶಪಾಲ್ ಬೇನಮ್, ತನ್ನ ಮಗಳ ಸಂತೋಷಕ್ಕಾಗಿ ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಲು ಯೋಚಿಸಿದ್ದೇನೆ ಎಂದು ಹೇಳಿದ್ದರು. ಅಲ್ಲದೇ, ಮಗಳ ಮದುವೆ ಕಾರ್ಡ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಅನೇಕ ಹಿಂದುತ್ವ ಸಂಘಟನೆಗಳು ಬಿಜೆಪಿ ಮುಖಂಡನ ಮಗಳು ಮುಸ್ಲಿಂ ಯುವಕನ ಜತೆ ಮದುವೆಯಾಗುತ್ತಿರುವುದನ್ನು ವಿರೋಧಿಸಿ, ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆಯನ್ನು ಕೂಡ ನಡೆಸಿದ್ದರು. ಈ ಮದುವೆಗೆ ಸಂಬಂಧಿಸಿಂತೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ಎದುರಾಗಿತ್ತು.

ಹೀಗಾಗಿ, ತಾವು ಸಾರ್ವಜನಿಕರ ಮಾತಿಗೆ ಗೌರವ ನೀಡುವುದರ ಜೊತೆಗೆ ಮೇ 28ರಂದು ನಡೆಯಬೇಕಿದ್ದ ತಮ್ಮ ಮಗಳ ಮದುವೆಯನ್ನು ರದ್ದುಗೊಳಿಸಿರುವುದಾಗಿ ಯಶಪಾಲ್ ಬೇನಮ್ ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net