ಸಿನಿಮಾ

ಫೇಸ್​ಬುಕ್ ಖಾತೆಯಲ್ಲಿ ಸರ್ಕಾರದ ವಿರುದ್ಧ ಅವಹೇಳನಕಾರಿ ಪೋಸ್ಟ; ಸರ್ಕಾರಿ ಶಾಲಾ ಶಿಕ್ಷಕ ಅಮಾನತ್

ಚಿತ್ರದುರ್ಗ: ಫೇಸ್​ಬುಕ್​​ ಖಾತೆಯಲ್ಲಿ ಸರ್ಕಾರದ ವಿರುದ್ಧ ಅವಹೇಳನಕಾರಿ ಪೋಸ್ಟ ಮಾಡಿರುವ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನನ್ನು ಅಮಾನತ್ತು ಮಾಡಲಾಗಿದೆ.

ಫೇಸ್​ಬುಕ್ ಖಾತೆಯಲ್ಲಿ ಸರ್ಕಾರಗಳ ಬಗ್ಗೆ ನಿಂದನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ಕಾನುಬೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಾಂತಮೂರ್ತಿ ಅವರನ್ನು ಬಿಇಓ ಎಲ್‌.ಜಯಪ್ಪ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಾನುಬೇನಹಳ್ಳಿಯ ಪ್ರಾಥಮಿಕ ಶಾಲಾ ಶಿಕ್ಷಕ ಶಾಂತಮೂರ್ತಿ, ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸುತ್ತಿದ್ದ ವೇಳೆ ಅವಹೇಳನಕಾರಿಯಾಗಿ ಫೇಸ್​​ಬುಕ್​​​ನಲ್ಲಿ ಬರೆದುಕೊಂಡಿದ್ದರು. ಹಿಂದಿನ ಮುಖ್ಯಮಂತ್ರಿಗಳ ಅವಧಿಯಲ್ಲಿ ಸಾಲ ಪಡೆದ ಕುರಿತು, ಎಸ್‌.ಎಂ ಕೃಷ್ಣ ಅವರ ಅವಧಿಯಲ್ಲಿ 3590 ಕೋಟಿ ರು, ಧರ್ಮಸಿಂಗ್‌ 15,635 ಕೋಟಿ ರು, ಎಚ್‌.ಡಿ ಕುಮಾರಸ್ವಾಮಿ 3,545 ಕೋಟಿ ರು, ಬಿಎಸ್‌ವೈ 25,653ಕೋಟಿ ರು, ಸದಾನಂದ ಗೌಡ 9,464 ಕೋಟಿ ರು, ಜಗದೀಶ್‌ ಶೆಟ್ಟರ್‌ 13,464 ಕೋಟಿ ರು, ಸಿದ್ದರಾಮಯ್ಯ 2,42,000 ಕೋಟಿ ರು. ಎಸ್‌.ಎಂ ಕೃಷ್ಣ ಅವರಿಂದ ಜಗದೀಶ್‌ ಶೆಟ್ಟರ್‌ ವರೆಗೆ ಮಾಡಿದ ಒಟ್ಟು ಸಾಲ 71,331 ಕೋಟಿ ರು. ಹಾಗೂ ಸಿದ್ದು ಮಾಡಿದ ಸಾಲ 2,42,000 ಕೋಟಿ ರು. ಇದ್ದು, ಬಿಟ್ಟಿಭಾಗ್ಯ ಕೊಡದೆ ಇನ್ನೇನು ಎಂದು ಮುಖ್ಯಮಂತ್ರಿಗಳು ರಾಜ್ಯಕ್ಕಾಗಿ ಮಾಡಿದ ಸಾಲಗಳನ್ನು ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಪ್ರಕಟಿಸಿದ್ದರು.

ಇದನ್ನೂ ಓದಿ: ಬರೆಯುವ ಮುನ್ನ ಸಂಪೂರ್ಣ ತಿಳಿದುಕೊಳ್ಳಿ: ಬಾಲಯ್ಯ ಸಿನಿಮಾ ಬಗ್ಗೆ ವದಂತಿ, ತಮನ್ನಾ ಬೇಸರ

ಶಿಕ್ಷಕನ ವರ್ತನೆ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಬಂದಿದ್ದು, ಚಿತ್ರದುರ್ಗ ಡಿಡಿಪಿಐ ಆದೇಶದಂತೆ ಅಮಾನತ್ ಆದೇಶ ಹೊರಡಿಸಲಾಗಿದೆ. ಸರ್ಕಾರಿ ಸೇವಾ ನಿಯಮಗಳ ಉಲ್ಲಂಘನೆ ಆರೋಪ ಹಿನ್ನೆಲೆ ಕ್ರಮ ಕೂಗೊಂಡಿದ್ದು, ಶಿಕ್ಷಕನಿಗೆ ಅಮಾನತ್ ಶಿಕ್ಷೆ ವಿಧಿಸಿ ಶಿಸ್ತು ಪ್ರಾಧಿಕಾರದ ಎಲ್. ಜಯಪ್ಪ ಆದೇಶ ಹೊರಡಿಸಿದ್ದಾರೆ.

International Tea Day 2023: ಚಹಾ ದಿನದ ಮಹತ್ವ, ಆಚರಣೆಯ ಬಗ್ಗೆ ನಿಮಗೆ ಗೊತ್ತಾ?

Latest Posts

ಲೈಫ್‌ಸ್ಟೈಲ್