ಬಿಜೆಪಿ-ಜೆಡಿಎಸ್ ವಿಜಯೋತ್ಸವ, ಸಿಹಿ ಹಂಚಿ ಸಂಭ್ರಮ

BJP
Published on

ಮೂರನೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿ | ಎಚ್.ಡಿ.ಕುಮಾರಸ್ವಾಮಿಗೆ ಒಲಿದ ಅದೃಷ್ಟ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮೂರನೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿಯಾದ ಹಿನ್ನೆಲೆಯಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ನಗರ ಸೇರಿ ಜಿಲ್ಲಾದ್ಯಂತ ಭಾನುವಾರ ವಿಜಯೋತ್ಸವ ನಡೆಸಿದರು.
ಬಿಜೆಪಿ ಕಾರ್ಯಕರ್ತರು ಸರ್ದಾರ್ ಪಟೇಲ್ ವೃತ್ತದಲ್ಲಿ ಸಂಭ್ರಮಿಸಿದರೆ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರಿಂದ ಜೆಡಿಎಸ್ ಕಾರ್ಯಕರ್ತರು ಪಕ್ಷದ ಕಚೇರಿಯಲ್ಲಿ ಸಿಹಿ ಹಂಚಿ ವಿಜಯೋತ್ಸವ ನಡೆಸಿದರು.
ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್ ಮಾತನಾಡಿ, ದೇಶದ ಇತಿಹಾಸದಲ್ಲಿ ಇಂದು ಐತಿಹಾಸಿಕ ಕ್ಷಣ. ಸತತ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಎನ್‌ಡಿಎ ನಾಯಕರಾಗಿ ಭಾರತವನ್ನು ವಿಕಸಿತ ರಾಷ್ಟçವಾಗಿಸುವತ್ತ ಕೊಂಡೊಯ್ಯಲಿದ್ದಾರೆ ಎಂದರು.
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವಾ ಅಷ್ಟಗಿ ಮಾತನಾಡಿ, ದೇಶದ ಇತಿಹಾಸದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದ ನರೇಂದ್ರ ಮೋದಿ ವಿಶ್ವ ಮೆಚ್ಚಿದ ನಾಯಕರು. ಭಾರತವನ್ನು ಬಲಿಷ್ಠ ಮತ್ತು ಸದೃಢ ರಾಷ್ಟçವಾಗಿಸಲು ಮೋದಿ ಜತೆ ಕೈಜೋಡಿಸಿದ ಎಲ್ಲ ಮಿತ್ರಪಕ್ಷದ ನಾಯಕರಿಗೆ ಧನ್ಯವಾದಗಳು ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಶರಣಪ್ಪ ತಳವಾರ, ಲಿಂಗರಾಜ ಬಿರಾದಾರ್, ಶಿವಯೋಗಿ ನಾಗನಹಳ್ಳಿ, ಅರವಿಂದ ಪೋದ್ದಾರ, ಭಾಗೀರಥಿ ಗುನ್ನಾಪುರ, ಮಹೇಶ ಚಹ್ವಾಣ್, ಪ್ರೀತಂ ಪಾಟೀಲ್, ಗೋಪಾಲಕೃಷ್ಣ ಕುಲಕರ್ಣಿ, ಶ್ರೀಧರ್ ಚವ್ಹಾಣ್, ರೇಣುಕಾಚಾರ್ಯ ಸಲಗರ, ರಾಜುಗೌಡ ನಾಗನಹಳ್ಳಿ, ರಾಹುಲ್ ಬಬಲಾದ ಇತರರಿದ್ದರು.
ಜೆಡಿಎಸ್ ಸಂಭ್ರಮ: ಮೋದಿ ಸಂಪುಟದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಜಿಲ್ಲಾಧ್ಯಕ್ಷ ಮುಸ್ತಾಖ ಅಲಿ ನೇತೃತ್ವದಲ್ಲಿ ವಿಜಯೋತ್ಸವ ನಡೆಯಿತು. ಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಡಾ.ಸಿದ್ದಣ್ಣ ಎಸ್.ಪಾಟೀಲ್, ಪ್ರಮುಖರಾದ ಸಂಜುಕುಮಾರ ಮಡಕಿ, ಸೈಯದ್ ಜಾಕಿರ್ ಹುಸೇನ್, ರಾಜಕುಮಾರ ಗುತ್ತೇದಾರ್, ಕಾಶೀನಾಥ ನಾಗರಾಮ, ಕಲ್ಯಾಣಿ ರಟಕಲ್, ಕೌಸರ್ ಶಾ, ಗುರುಲಿಂಗಪ್ಪ ಗೌರ್, ವಿಕಾಸ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net