ಮೋದಿ ಮೆಗಾ ರೋಡ್​ ಶೋ: ಬಿಜೆಪಿ ಬಾವುಟಗಳನ್ನು ತೆರವುಗೊಳಿಸಿದ ಚುನಾವಣಾ ಅಧಿಕಾರಿಗಳು

BJP Flags
Published on

ಬೆಂಗಳೂರು: ಪ್ರಧಾನಿ ಮೋದಿ ಅವರ ರೋಡ್​ ಶೋ ಹಿನ್ನೆಲೆಯಲ್ಲಿ ರಸ್ತೆಯ ಎರಡು ಬದಿಗಳಲ್ಲಿ ಅಳವಡಿಸಲಾಗಿದ್ದ ಬಿಜೆಪಿ ಬಾವುಟಗಳನ್ನು ಚುನಾವಣಾ ಅಧಿಕಾರಿಗಳ ಸೂಚನೆ ಮೇರೆಗೆ ತೆರವುಗೊಳಿಸಲಾಯಿತು.

ಚುನಾವಣೆ ಅಧಿಕಾರಿಗಳ ವಿರೋಧದ ನಡುವೆಯೂ ಬಿಜೆಪಿ ಕಾರ್ಯಕರ್ತರು ಬಿಜೆಪಿ ಬಾವುಟ ಹಾಕಲು ಮುಂದಾದರು. ಇದೀಗ ಮತ್ತೆ ಬಾವುಟ ತೆರವುಗೊಳಿಸುವಂತೆ ಚುನಾವಣಾ ಅಧಿಕಾರಿಗಳು ಸೂಚನೆ ನೀಡಿದ ಮೇರೆಗೆ ಕಾಡು ಮಲ್ಲೇಶ್ವರ ದೇಗುಲದ ಬಳಿ ಇರುವ ಬಾವುಟಗಳನ್ನು ತೆರವುಗೊಳಿಸಲಾಯಿತು.

ನಗರದ ಹಲವೆಡೆ ಬಿಜೆಪಿ ಬಾವುಟಗಳು ರಾರಾಜಿಸುತ್ತಿದ್ದು, ಚುನಾವಣಾ ಅಧಿಕಾರಿಗಳ ಸೂಚನೆ ಮೇರೆಗೆ ಬಾವುಗಳನ್ನು ತೆರೆವುಗೊಳಿಸಲಾಗುತ್ತಿದೆ. ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಬಾವುಟಗಳನ್ನು ತೆರವುಗೊಳಿಸಲಾಗಿದೆ.

ಕಾಡು ಮಲ್ಲೇಶ್ವರ ದರ್ಶನ

ಧಾನಿ ಮೋದಿ ಮಲ್ಲೇಶ್ವರದಲ್ಲಿರುವ ಕಾಡು ಮಲ್ಲೇಶ್ವರ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ನಿನ್ನೆ ರಾತ್ರಿಯೇ ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಡು ಮಲ್ಲೇಶ್ವರ ದೇಗುಲದಲ್ಲಿ ಪ್ರಧಾನಿ ಮೋದಿ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪೊಲೀಸ್ ಮತ್ತು ಎಸ್ಪಿಜಿ ಕಾಡುಮಲ್ಲೇಶ್ವರದ ಭದ್ರತೆಯನ್ನು ವಸಿಕೊಂಡಿದ್ದಾರೆ. ಈಗಾಗಲೇ ದೇವಸ್ಥಾನಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ.

ಮೋದಿ ರೋಡ್​ ಶೋ ರೂಟ್​ ಮ್ಯಾಪ್​

PM Modi Road show Route Map

ಈ ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರ ಬಂದ್

ಪ್ರಧಾನಿ ಮೋದಿ ರೋಡ್​ ಶೋ ಹಿನ್ನೆಲೆ ಬೆಳಗ್ಗೆ 8ರಿಂದ ಮಧ್ಯಾಹ್ನ 1 ಗಂಟೆವರೆಗೆ ಈ ಕೆಳಕಂಡ ರಸ್ತೆಗಳಲ್ಲಿ ಸಂಚರಿಸದೆ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ. ರಾಜಭವನ ರಸ್ತೆ, ರಮಣ ಮಹರ್ಷಿ ರಸ್ತೆ, ಮೇಖ್ರಿ ವೃತ್ತ, ಆರ್​ಬಿಐ ಲೇಔಟ್, ಜೆ.ಪಿ. ನಗರ, ರೋಸ್ ಗಾರ್ಡನ್, ಜೆ.ಪಿ. ನಗರ, ಸಿರ್ಸಿ ಸರ್ಕಲ್, ಜೆ.ಜೆ. ನಗರ, ಬಿನ್ನಿಮಿಲ್ ರಸ್ತೆ, ಶಾಲಿನಿ ಮೈದಾನ, ಸೌತ್ ಎಂಡ್ ರಸ್ತೆ, ಆಮುಗಂ ಸರ್ಕಲ್, ಬುಲ್ ಟೆಂಪಲ್ ರಸ್ತೆ, ರಾಮಕೃಷ್ಣಾಶ್ರಮ, ಉಮಾ ಟಾಕೀಸ್, ಟಿ.ಆರ್. ಮಿಲ್, ಚಾಮರಾಜಪೇಟೆ ಮುಖ್ಯ ರಸ್ತೆ, ಬಾಳೇಕಾಯಿ ಮಂಡಿ, ಕೆ.ಪಿ. ಅಗ್ರಹಾರ, ಮಾಗಡಿ ಮುಖ್ಯರಸ್ತೆ, ಚೋಳೂರುಪಾಳ್ಯ, ಎಂ.ಸಿ. ವೃತ್ತ, ಪಶ್ಚಿಮ ಕಾರ್ಡ್ ರಸ್ತೆ, ಎಂ.ಸಿ. ಲೇಔಟ್, ನಾಗರಬಾವಿ ಮುಖ್ಯರಸ್ತೆ, ಬಿಜಿಎಸ್ ಮೈದಾನ, ಹಾವನೂರು ಸರ್ಕಲ್, ಬಸವೇಶ್ವರನಗರ 8ನೇ ಮುಖ್ಯರಸ್ತೆ ಮತ್ತು 15ನೇ ಮುಖ್ಯರಸ್ತೆ, ಶಂಕರಮಠ, ಮೋದಿ ಆಸ್ಪತ್ರೆ ರಸ್ತೆ, ನವರಂಗ್ ವೃತ್ತ, ಎಂಕೆಕೆ ರಸ್ತೆ, ಮಲ್ಲೇಶ್ವರ ಸರ್ಕಲ್, ಸಂಪಿಗೆ ರಸ್ತೆ ಮತ್ತು ಸ್ಯಾಂಕಿ ರಸ್ತೆ ಬಳಸದಂತೆ ಸಂಚಾರ ಪೊಲೀಸರು ತಿಳಿಸಿದ್ದಾರೆ.

ವಿಶೇಷ ಸೂಚನೆ

* ರೋಡ್ ಶೋ ಮಾರ್ಗದ ಅಕ್ಕಪಕ್ಕದ ಕಟ್ಟಡ, ಮನೆಗಳ ಮಹಡಿ ಮೇಲೆ ನಿಲ್ಲಲು ಅವಕಾಶವಿಲ್ಲ.

* ಹೋಟೆಲ್, ಅಂಗಡಿ, ಮಳಿಗೆಗಳ ವಹಿವಾಟು ಬಂದ್.

* ಕಟ್ಟಡಗಳ ಬಳಿ, ಒಳಗೆ ಅಪರಿಚಿತರು ಒಳಪ್ರವೇಶಿಸದಂತೆ ನಿರ್ಬಂಧ.

* ನಿಗದಿತ ಸ್ಥಳದಲ್ಲಿ ನಿಂತು ರೋಡ್ ಶೋ ವೀಕ್ಷಿಸಬೇಕು.

* ಕಟ್ಟಡಗಳ ಒಳಗೆ ಮತ್ತು ಹೊರಗೆ ಅಡ್ಡಾಡಲು ಅವಕಾಶವಿಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net