ಬುದ್ಧಿ ಮಾಂದ್ಯ ಮಕ್ಕಳೊಂದಿಗೆ ಸಂಕ್ರಾಂತಿ ಆಚರಣೆ

bkt-15-6
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಯಲಗೂರೇಶ್ವರ ಬುದ್ಧಿ ಮಾಂದ್ಯ ಮಕ್ಕಳ ಶಾಲೆಯಲ್ಲಿ ಬಿಜೆಪಿ ಮುಖಂಡರು ಮಕರ ಸಂಕ್ರಾಂತಿ ಹಬ್ಬ ಆಚರಿಸಿದರು.
Published on

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಯಲಗೂರೇಶ್ವರ ಬುದ್ಧಿ ಮಾಂದ್ಯ ಮಕ್ಕಳ ಶಾಲೆಯಲ್ಲಿ ಬಿಜೆಪಿ ಮುಖಂಡರು ಮಕರ ಸಂಕ್ರಾಂತಿ ಹಬ್ಬ ಆಚರಿಸಿದರು. ಭಾನುವಾರ ಹಬ್ಬದ ಅಂಗವಾಗಿ ಸಿಹಿಊಟ ಉಣಬಡಿಸಿ ಮಕ್ಕಳಿಗೆ ಸ್ಪೋರ್ತಿ ತುಂಬಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಮಾತನಾಡಿ, ಈಗಿನ ಕಾಲದಲ್ಲಿ ಸಾಮಾನ್ಯ ಮಕ್ಕಳನ್ನು ಪಾಲನೆ ಮಾಡುವುದೇ ಸವಾಲ್ ಆಗಿದೆ. ಹೆತ್ತವರಿಗಿಂತಲು ಶಿಕ್ಷಕರು ಬುದ್ಧಿ ಮಾಂದ್ಯ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿz್ದÁರೆ. ವಿಶೇಷ ಮಕ್ಕಳ ಜೋಪಾನ ಮಾಡುವುದು ದೊಡ್ಡದು. ಈ ಶಾಲೆಗೆ ಅವಶ್ಯಕತೆ ಇರುವ ಸೋಲಾರ್ ವಾಟರ್ ಹೀಟರ್ ಸಿಸ್ಟಮï ನೀಡುವುದಾಗಿ ವಾಗ್ದಾನ ಮಾಡಿದರು.
ಯುವ ಮುಖಂಡ ಸಂತೋಷ ಹೋಕ್ರಾಣಿ ಮಾತನಾಡಿ, ಬುದ್ದಿ ಮಾಂದ್ಯ ಮಕ್ಕಳೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿದ್ದು ಸಂತೋಷ ಎನಿಸಿದೆ. ಅವರೊಂದಿಗೆ ಕಾಲ ಕಳೆದು ಸಹ ಬೋಜನ ಮಾಡಿದ್ದು ಮರೆಯಲಾಗದ ಕ್ಷಣ ಎಂದರು.
ವಿಜಯ ಸುಲಾಖೆ ಮಾತನಾಡಿ, ಇಂತಹ ವಿಶೇಷ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಶಿಕ್ಷಕರಿಗೆ ಅನಂತ ಪ್ರಣಾಮಗಳು. ಸಾಮಾನ್ಯ ಮಕ್ಕಳಂತೆ ಅವರನ್ನು ರೂಪಿಸುವಲ್ಲಿ ನಿಮ್ಮ ಪಾತ್ರ ಹಿರಿದು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳು ಹಾಡು ಹಾಡಿ ನೃತ್ಯ ಮಾಡಿ ಸಂಭ್ರಮಿಸಿದರು. ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಗಣೇಶ ಚಿತ್ರಗಾರ, ಶಾಲೆಯ ಮುಖ್ಯ ಶಿಕ್ಷಕ ಎಸ್.ಎಂ.ಪಾಟೀಲ, ಸಂಗಪ್ಪ ಕಲ್ಲೂರ, ಸಂಗಪ್ಪ ತೆಗಿನಮನಿ, ಭೀಮಶಿ ಹೊನ್ನವಳ್ಳಿ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ, ಕೂಡ್ಲೆಪ್ಪ ಚಿತ್ತರಗಿ, ರವಿ ರಾಠೋಡ, ಗುರು ಅನಗವಾಡಿ, ಅರುಣ ಲೋಕಾಪುರ, ರಾಜು ಗೌಳಿ, ರಾಜು ಮೂಲಿಮನಿ, ಹರಿಶ ರಂಗರೇಜಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net