ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಹೊಯ್​-ಕೈ; ಮಾಜಿ‌ ಮೇಯರ್ ಹಾಗೂ ಸಹಚರರನ್ನ ಬಂಧಿಸುವಂತೆ ಧರಣಿ..

bjp vs congress.
Published on

ಬೆಂಗಳೂರು: ಬಿಟಿಎಂ ಲೇಔಟ್​ನ ಗಂಗೋತ್ರಿ ಬಾರ್ ಬಳಿ ನಿನ್ನೆ ರಾತ್ರಿ ಘಟನೆಯೊಂದು ನಡೆದಿದ್ದು ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆಯಾಗಿದ್ದು ಕಾಂಗ್ರೆಸ್​ ಕಾರ್ಯಕರ್ತ ಇದನ್ನು ಮಾಡಿದ್ದಾರೆ ಎಂದು ಬಿಜೆಪಿ ಕಾರ್ಕರ್ತರು ಆರೋಪಿಸಿದ್ದಾರೆ.

ನಿನ್ನೆ ಚುನಾವಣೆಯ ಪ್ರಚಾರದ‌ ಸಂಧರ್ಭದಲ್ಲಿ ಈ ಘಟನೆ ನಡೆದಿರುವ ಸ್ಥಳಕ್ಕೆ ಸ್ಥಳಿಯ ಪೊಲೀಸರು ಆಗಮಿಸಿದ್ದರು. ಘಟನೆ ತಿಳಿಗೊಳಿಸಲು ಪೊಲೀಸರು ಪ್ರಯತ್ನಿಸಿದ್ದು, ಎರಡೂ ಪಕ್ಷದವರು ಕೈ‌ ಕೈ ಮಿಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಬಿಜೆಪಿ ಕಾರ್ಯಕರ್ತರು ಇಡೀ ರಾತ್ರಿ ಧರಣಿ ಮಾಡಿದ್ದರು. ಹಲ್ಲೆ ಮಾಡಿದ್ದಾರೆ ಎನ್ನಲಾದ ಮಾಜಿ ‌ಮೇಯರ್ ಮಂಜುನಾಥ್ ರೆಡ್ಡಿ ಹಾಗೂ ಸಹಚರರನ್ನ ಬಂಧಿಸುವಂತೆ ಬಿಜೆಪಿ ಧರಣಿ ಕುಳಿತಿದೆ.

ಧರಣಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದು ಅದರ ಬೆನ್ನಲ್ಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆಗೆ ಸಿದ್ದತೆ ನಡೆಸಿದೆ. ನೂರಾರು ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದ್ದು ಇದೇ ಸಂದರ್ಭಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ಬಿಜೆಪಿ ಪರ ಕೆಲಸ ಮಾಡ್ತಿದೆ ಎಂದು ಕಾಂಗ್ರೆಸ್ ಆರೋಪ ಹೊರಿಸಿದೆ.

ಬಿಜೆಪಿಯವರು ಮನೆ ಮನೆಗೆ ಹೋಗಿ ಹಣ ಹಂಚುತ್ತಿದ್ದಾರೆ. ಇದೆಲ್ಲವನ್ನ ನೋಡಿಕೊಂಡು ಪೊಲೀಸ್ರು ಕಣ್ಮುಚ್ಚಿ ಕುಳಿತಿದ್ದಾರೆ. ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಕೇಸ್ ದಾಖಲಿಸಿ ಕಿರುಕುಳ ನೀಡ್ತಿದ್ದಾರೆಂದು ಆರೋಪಿಸಿ‌ ಪ್ರತಿಭಟನೆಗೆ ಕೂಡ ಸಿದ್ದತೆ ನಡೆಸಲಾಗಿದೆ. ಠಾಣೆ ಮುಂದೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net