ಅಭಿಮಾನಿಗಳಿಂದ ಕೇಳಿಬಂತು ಸೀರೆ ಹಂಚಿಕೆ ವಿಚಾರ; ಯತ್ನಾಳ್ ವ್ಯಂಗ್ಯ

yatnal
Published on

ಬಬಲೇಶ್ವರ: ಯತ್ನಾಳ್ ಬಬಲೇಶ್ವರಲ್ಲಿ ಭಾಷಣ ಮಾಡುತ್ತಿದ್ದ ವೇಳೆ ನರೆದಿದ್ದ ಅಭಿಮಾನಿಗಳಿಂದ ಸೀರೆ ಹಂಚಿಕೆ ವಿಚಾರ ಪ್ರಸ್ತಾಪ ಆಗಿದೆ. ಆಗ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ಇದೇ ಸಂದರ್ಭದಲ್ಲಿ ಎಚ್​ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿಯ ವಿಚಾರ ಪ್ರಸ್ತಾಪ ಮಾಡಿ ಜೆಡಿಎಸ್ ಕಾಲೆಳೆದಿದ್ದಾರೆ.

ತಮ್ಮ ಭಾಷಣದಲ್ಲಿ ಯತ್ನಾಳ್ "ಸೀರೆಯದ್ದೆ ಚಿಂತೆ ಶುರುವಾಗಿದೆ ನಿಮಗೆ ಧೋತರಾ (ಪಂಚೆ) ಕೊಟ್ಟಿಲ್ಲವಾ? ಪದೆ ಪದೆ ಸೀರೆ ಸೀರೆ ಅಂತೀದಿರಿ. ಧೋತರದವರು ಯಾರೂ ಓಟ್ ಹಾಕೋದಿಲ್ಲಾ ಅಂತ ಕೊಟ್ಟಿಲ್ಲವಾ ಹೇಗೆ?. ಏನು ಕೊಟ್ರೂ ಏನೂ ಆಗೋದಿಲ್ಲಾ.

ಮಗನ ಸಲುವಾಗಿ ಎಚ್​ಡಿಕೆ 150 ಕೋಟಿ ರೂ. ಖರ್ಚು ಮಾಡಿದ್ರು!

ಮಗನ ಸಲುವಾಗಿ‌ ಕುಮಾರಸ್ಬಾಮಿ ಅವರು ಮಂಡ್ಯದಲ್ಲಿ ೧೫೦ಕೋಟಿ ಖರ್ಚು ಮಾಡಿದ್ದಾರೆ. ಎಲ್ಲಿದಿಯಪ್ಪಾ ನಿಖೀಲ್ ಅಂತ ಕೇಳ್ತಿದ್ರು, ಇಲ್ಲೆ ಇದ್ದೀನಪ್ಪಾ ಜೀ, ಓ... ಜನ್ರ ಮಧ್ಯದಲ್ಲಿದಿಯಾ? 150 ಕೋಟಿ ಖರ್ಚು ಮಾಡಿ ಡಬಕ್(ದುಬಕ) ಅಂತ ಬಿದ್ರು.

ಹಂಗಾಗಿ ಅದನ್ನು ಹಂಚಿದ್ರೂ, ಇದನ್ನ ಹಂಚಿದ್ರು ಎಂದು ನೀವೇನು ತಿಳಿದುಕೊಳ್ಳಬೇಡಿ. ಹಂಚುವವರು ಬಹಳ‌ ಹಂಚುತ್ತಾರೆ, ಅದರಿಂದ ಏನೂ ಆಗೋದಿಲ್ಲಾ" ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net