ಸಾಲಬಾಧೆಯಿಂದ ಯುವಕ ಆತ್ಮಹತ್ಯೆ

31 BIRUR 02 sucide
ಪ್ರದೀಪ್
Published on

ಬೀರೂರು: ಮನೆ ಕಟ್ಟಲು ಮಾಡಿದ್ದ ಸಾಲ ತೀರಿಸಲಾಗದೆ ಮನನೊಂದು ಯುವಕನೊಬ್ಬ ನೇಣಿಗೆ ಶರಣಾಗಿದ್ದಾನೆ. ಪಟ್ಟಣದ ಬಳ್ಳಾರಿ ಕ್ಯಾಂಪ್ ವಾಸಿ ಪ್ರದೀಪ (35) ಮೃತ ದುರ್ದೈವಿ. ಕಾರು ಚಾಲಕ ವೃತ್ತಿ ಮಾಡುತ್ತಿದ್ದ ಯುವಕ 10 ವರ್ಷಗಳ ಹಿಂದೆ ಮನೆ ನಿರ್ಮಾಣ ಮಾಡಲು 5 ಲಕ್ಷ ರೂ. ಪರಿಚಯಸ್ಥರ ಬಳಿ ಕೈಸಾಲ ಮಾಡಿಕೊಂಡಿದ್ದ. 6 ತಿಂಗಳ ಹಿಂದೆ ಆ ಸಾಲ ತೀರಿಸಲು ಖಾಸಗಿ ೈನಾನ್ಸ್ ಒಂದರಲ್ಲಿ ಸಾಲ ತೆಗೆದುಕೊಂಡಿದ್ದು ಸಾಲವನ್ನು ಹೇಗೆ ತೀರಿಸುವುದು ಎಂದು ಬಹಳ ಯೋಚಿಸುತ್ತಿದ್ದ. ಅದಕ್ಕೆ ತಾಯಿ ಮಂಜುಳಮ್ಮ ದುಡಿದು ತೀರಿಸಿದರಾಯಿತು ಎಂದು ಸಮಾಧಾನಪಡಿಸಿದ್ದಾರೆ. ಅದೇ ಯೋಚನೆಯಲ್ಲಿ ಖಿನ್ನತೆಗೆ ಒಳಗಾಗಿದ್ದ ಪ್ರದೀಪ್ ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹಾಲ್‌ನ ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ. ತಾಯಿ ಮಂಜುಳಮ್ಮ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net