

ಮುಂಬೈ: ಬಾಲಿವುಡ್ ಸ್ಟಾರ್ ದಂಪತಿ ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ಕಳೆದ ನವೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಈ ಖುಷಿಯಲ್ಲಿರುವ ಜೋಡಿ ಇತ್ತೀಚೆಗಷ್ಟೆ ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕಾಯಿತು ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.
ಮಗು ಜನಿಸಿದ ಸಂತಸ ಮತ್ತು ಆಗ ತಿಳಿದು ಬಂದ ಆಘಾತಕಾರಿ ವಿಷಯವನ್ನು ಬಿಪಾಶಾ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ಮಗು ಜನಿಸಿದ ಖುಷಿಯಲ್ಲಿದ್ದ ನನಗೆ ಮೂರು ದಿನಗಳ ಬಳಿಕ ಆ ಪುಟ್ಟ ಹೃದಯದಲ್ಲಿ ಎರಡು ರಂಧ್ರಗಳಿರುವ ವಿಷಯ ತಿಳಿಯಿತು. ಆ ವಿಷಯ ಕೇಳಿದಾಗ ಆದ ಆಘಾತ ಮತ್ತು ಸಂಕಟ ಯಾವ ತಾಯಿಗೂ ಬೇಡ! ಮಗು ಜನಿಸಿದ ಸಂತಸ ಮತ್ತು ನಗುವಿಗಿಂತ ಹೆಚ್ಚು ಆ ನೋವು ಕಾಡಿತ್ತು. ನಂತರ ಮೂರು ತಿಂಗಳ ಪುಟ್ಟ ಜೀವ ಶಸ ಚಿಕಿತ್ಸೆಗೆ ಒಳಗಾಗಬೇಕಾಯಿತು. ಕುಟುಂಬದವರೆಲ್ಲರೂ ಸಂಭ್ರಮದ ವಾತಾವರಣದಲ್ಲಿದ್ದರೆ ನನಗೆ ಮತ್ತು ಕರಣ್‌ಗೆ ಏನು ಮಾಡುವುದು ಎಂದು ಗೊತ್ತಾಗುತ್ತಿರಲಿಲ್ಲ. ಆಕೆ ಆಪರೇಷನ್ ಥಿಯೇಟರ್‌ನಲ್ಲಿದ್ದ ಆರು ಗಂಟೆಗಳ ಕಾಲ ಸಂಕಟ ಅನುಭವಿಸಿದ್ದೇನೆ. ಬಳಿಕ ಚಿಕಿತ್ಸೆ ಯಶಸ್ವಿಯಾಗಿ ಮಗಳು ದೇವಿ ಗುಣಮುಖಳಾಗಿದ್ದಾಳೆ ಎಂಬ ನೆಮ್ಮದಿಯಿದೆ’ ಎಂದು ನೋವನ್ನು ಹಂಚಿಕೊಂಡಿದ್ದಾರೆ ನಟಿ ಬಿಪಾಶಾ. (ಏಜೆನ್ಸೀಸ್)