

ಚೆನ್ನೈ: ಲಾಕ್‌ಡೌನ್ ಇರುವ ಸಮಯದಲ್ಲಿ ಮನೆಯಿಂದ ಹೊರಕ್ಕೆ ಹೋಗಬಾರದು ಎಂಬ ನಿಯಮವಿದೆ ಅದನ್ನು ಉಲ್ಲಂಘಿಸಿದ ವ್ಯಕ್ತಿಯೊಬ್ಬನನ್ನು ತಮಿಳುನಾಡಿನ ಅಂಬುರ್‌ನಲ್ಲಿ ಪೊಲೀಸರು ತಡೆದು ನಿಲ್ಲಿಸಿದ್ದು.
ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ದವನ ಬೈಕ್ ಅನ್ನು ಪೊಲೀಸರು ಸೀಜ್ ಮಾಡಿದ್ದರು. ಅಣ್ಣಾ ನಗರದಲ್ಲಿ ವಾಸವಿರುವ 27 ವರ್ಷದ ಮುಗಿಳನ್ ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿದ್ದ. ಒಂದು ಲಾಕ್‌ಡೌನ್ ನಿಯಮ ಉಲ್ಲಂಘನೆ, ಇನ್ನೊಂದು ಪತ್ನಿ ಮತ್ತು ಮೂವರು ಮಕ್ಕಳನ್ನು ಬೈಕ್‌ನಲ್ಲಿ ಕುಳ್ಳರಿಸಿಕೊಂಡು ಹೋಗುವ ಮೂಲಕ ಅದರ ಉಲ್ಲಂಘನೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ತಡೆದುನಿಲ್ಲಿಸಿ, ಬೈಕ್ ಸೀಜ್ ಮಾಡಿದ್ದಾರೆ. ಪೊಲೀಸರು ತುರ್ತು ಕೆಲಸ ಏನಿತ್ತು ಎಂಬಿತ್ಯಾದಿಯಾಗಿ ಪ್ರಶ್ನೆ ಮಾಡಿದರೂ ಮುಗಿಳಿನ್ ಸರಿಯಾಗಿ ಉತ್ತರ ಕೊಟ್ಟಿಲ್ಲವಂತೆ. ಆದ್ದರಿಂದ ತಾವು ಬೈಕ್ ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಬೈಕ್ ಬಿಟ್ಟು ಬಿಡುವಂತೆ ಪೊಲೀಸರಿಗೆ ಮುಳಿಗಿನ್ ದುಂಬಾಲು ಬಿದ್ದರೂ ಅವರು ಕೊಡಲಿಲ್ಲ.
ಇದರಿಂದ ನೊಂದುಕೊಂಡ ಮುಗಿಳನ್ ಬೈಕ್ ಇಲ್ಲದೇ ಹೆಂಡತಿ ಮಕ್ಕಳೊಂದಿಗೆ ವಾಪಸಾಗಿದ್ದಾನೆ. ಆದರೆ ಅದೆಷ್ಟು ಅವರು ನೊಂದುಕೊಂಡಿದ್ದರು ಎಂದರೆ ಮನೆಗೆ ಬಂದವರೇ ಮನೆಗೆ ಬಂದು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದಾರೆ!
ರಸ್ತೆಯ ಮೇಲೆ ಈ ಯತ್ನ ನಡೆಯುತ್ತಿದ್ದಂತೆಯೇ ಅಲ್ಲಿಯೇ ಇದ್ದ ಪೊಲೀಸರು ಇವರನ್ನು ಬಚಾವ್ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಂಭೀರ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ವಾಹನ ಸೀಜ್ ಮಾಡಿರುವ ಐವರು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.