

ಬೆಂಗಳೂರು: ಶನಿವಾರ ನಗರದ ಕೆಐಎಬಿ ಏರ್ಪೋರ್ಟ್ ಎಲಿವೇಟೆಡ್ ರಸ್ತೆಯ ಪ್ಲೈ ಓವರ್ ಮೇಲೆ ಡಿವೈಡರ್ಗೆ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಈ ಘಟನೆಯಲ್ಲಿ ವಿಕ್ರಮ್(28) ಮತ್ತು ಅಮಿತ್ ಸಿಂಗ್(27) ಸಾವನ್ನಪ್ಪಿದ ಯುವಕರು. ಮತ್ತೋರ್ವ ಸವಾರ ಸೌರಬ್ (27)ಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಲಹಂಕದ ಸಂತೆ ಗೇಟ್ ಫ್ಲೈ ಓವರ್ ಮೇಲೆ ಈ ಅಪಘಾತ ನಡೆದಿದೆ.
ಮರಣೋತ್ತರ ಪರೀಕ್ಷೆಗಾಗಿ ಸಾವನ್ನಪ್ಪಿದ ಯುವಕರ ಮೃತದೇಹವನ್ನು ಯಲಹಂಕದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕುರಿತು ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.