ದೇವರಿಗೆ ಹರಕೆ ತೀರಿಸಿ ಮನೆಗೆ ತೆರಳುತ್ತಿದ್ದ ಮೂವರು ಮಾರ್ಗಮಧ್ಯೆ ದುರ್ಮರಣ! ಕಲಬುರಗಿಯಲ್ಲಿ ದುರಂತ

accident
Published on

ಕಲಬುರಗಿ: ನಿಂತಿದ್ದ ಲಾರಿಗೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಕಲಬುರಗಿಯ ನಾವದಗಿ ಬಳಿ ಸಂಭವಿಸಿದೆ. ಇವರೆಲ್ಲರೂ ದೇವರ ಹರಕೆ ತೀರಿಸಲೆಂದು ಹೋಗಿದ್ದರು. ಮನೆಗೆ ಹಿಂತಿರುಗುವಾಗ ಮಾರ್ಗದಲ್ಲೇ ಬಾರದ ಲೋಕಕ್ಕೆ ಹೋಗಿದ್ದಾರೆ.

ದೀಪಕ್(45), ಯುವರಾಜ್(17) ಮತ್ತು ರಾಹುಲ್(17) ಮೃತ ದುರ್ದೈವಿಗಳು. ಇವರೆಲ್ಲರೂ ಕಲಬುರಗಿಯ ಕಮಲಾಪುರದ ಗೋಗಿ ತಾಂಡಾ ನಿವಾಸಿಗಳು. ದೇವರ ಹರಕೆ ತೀರಿಸಲೆಂದು ಕುಟುಂಬಸ್ಥರ ಜತೆ ಸಾವಳಗಿ ತಾಂಡಾಕ್ಕೆ ಹೋಗಿದ್ದರು. ಪೂಜೆ ಮುಗಿದ ಬಳಿಕ ಮಂಗಳವಾರ ರಾತ್ರಿ ವಾಪಸ್​ ಆಗುವಾಗ ಈ ದುರಂತ ಸಂಭವಿಸಿದೆ. ಕುಟುಂಬಸ್ಥರು ಕ್ರೂಸರ್ ವಾಹನದಲ್ಲಿ ತೆರಳುತ್ತಿದ್ದರು. ದೀಪಕ್​, ಯುವರಾಜ್​, ರಾಹುಲ್​ ಮೂವರೂ ಬೈಕ್​ನಲ್ಲಿ ಹೋಗುತ್ತಿದ್ದರು. ರಸ್ತೆಬದಿ ನಿಂತಿದ್ದ ಲಾರಿಗೆ ಬೈಕ್​ ಡಿಕ್ಕಿಯಾಗಿದ್ದು ಎಲ್ಲರೂ ದುರಂತ ಅಂತ್ಯ ಕಂಡಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net