ಭೀಕರ ರಸ್ತೆ ಅಪಘಾತದಲ್ಲಿ ಅಪ್ಪ ಮೃತ! ಪುತ್ರನಿಗೆ ಗಂಭೀರ ಗಾಯ | Bike Accident

bike accident
Published on

ಚಾಮರಾಜನಗರ: ತಂದೆ-ಮಗ ತೆರಳುತ್ತಿದ್ದ ಬೈಕ್​ಗೆ ಹಿಂಬದಿಯಿಂದ ವೇಗವಾಗಿ ಬಂದ ಮತ್ತೊಂದು ಬೈಕ್​ ಡಿಕ್ಕಿ (Bike Accident) ಹೊಡೆದ ಪರಿಣಾಮ, ಓರ್ವ ವ್ಯಕ್ತಿಯ ಪ್ರಾಣಪಕ್ಷಿ ಹಾರಿಹೋಗಿದೆ. ಮೃತ ವ್ಯಕ್ತಿಯನ್ನು ಹನೂರು ತಾಲೂಕಿನ ಲೊಕ್ಕನಹಳ್ಳಿಯ ಟಿ.ಎಂ ಮಣಿ (64) ಎಂದು ಗುರುತಿಸಲಾಗಿದ್ದು, ಇವರ ಪುತ್ರ ಹರಿ ಅಕಿಲೇಶ್ (21) ಗಾಯಗೊಂಡು, ಅದೃಷ್ಟವಶಾತ್​ ಬದುಕುಳಿದಿದ್ದಾರೆ.

ಇವರಿಬ್ಬರೂ ಬೈಕ್​ನಲ್ಲಿ ತೆರಳುವ ವೇಳೆ ಹಿಂಬದಿಯಿಂದ ಬಂದ ಬೈಕ್‌ ಡಿಕ್ಕಿ ಹೊಡೆದಿದೆ. ಪರಿಣಾಮ ತಂದೆ ತೀವ್ರ ಗಾಯಗೊಂಡರೆ, ಪುತ್ರನಿಗೆ ಕೈ, ಕಾಲು ಹಾಗೂ ಮುಖ ಭಾಗಕ್ಕೆ ಸಣ್ಣಪುಟ್ಟ ಗಾಯಗಳಾಗಿತ್ತು. ಗಾಯಗೊಂಡ ಇಬ್ಬರನ್ನು ತಕ್ಷಣವೇ ಕುಟುಂಬಸ್ಥರು ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮಣಿ ಮೃತಪಟ್ಟಿದ್ದಾರೆ.

ಈ ಸಂಬಂಧ ಮೃತರ ಪುತ್ರ ಹರಿ ಅಕಿಲೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಹನೂರು ಪೊಲೀಸರು, ಸೋಮವಾರ (ಅ.14) ಮೃತದೇಹವನ್ನು ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿ, ವೈದ್ಯರಿಂದ ಮರಣೋತ್ತರ ಪರೀಕ್ಷೆ ವರದಿಯನ್ನು ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net