ಇದೇ ನನ್ನ ಕೊನೆಯ ಚುನಾವಣೆ: ಬಿಹಾರ ಸಿಎಂ ನಿತೀಶ್​ ಕುಮಾರ್​

Nitish
Published on

ಪಟನಾ: ಬಿಹಾರ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದೆ. ನವೆಂಬರ್​ 7ರಂದು ಅಂತಿಮ ಹಂತದ ಮತದಾನ ನಡೆಯಲಿದೆ. ಎಲ್ಲ ಪಕ್ಷಗಳಿಂದ ಪ್ರಚಾರದ ಭರಾಟೆ ಜೋರಾಗಿದ್ದು, ಇದರ ನಡುವೆ ಹಾಲಿ ಸಿಎಂ ನಿತೀಶ್​ ಕುಮಾರ್​ ರಾಜಕೀಯ ನಿವೃತ್ತಿಯ ಮಾತುಗಳನ್ನಾಡುವ ಮೂಲಕ ಜನರನ್ನು ಅಚ್ಚರಿಗೆ ದೂಡಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಆಗಲಿದೆ ಎಂದು ಧಮ್ಧಾಹದ ಪೂರ್ನಿಯಾ ಸಮಾವೇಶದಲ್ಲಿ ಜೆಡಿಯು ಪಕ್ಷದ 69 ವರ್ಷದ ನಿತೀಶ್​ ಹೇಳಿದರು.

ದಯವಿಟ್ಟು ತಿಳಿಯಿರಿ, ಇಂದು ಪ್ರಚಾರದ ಅಂತಿಮ ದಿನ. ನಾಡಿದ್ದು ಅಂತಿಮ ಹಂತದ ಮತದಾನ ನಡೆಯಲಿದೆ. ಎಲ್ಲವು ಒಳ್ಳೆಯದಾಗಲಿದ್ದು, ಅಂತ್ಯವು ಸಹ ಒಳ್ಳೆಯದ್ದೇ ಆಗಿರುತ್ತದೆ ಎಂದು ನಿತೀಶ್​ ತಿಳಿಸಿದರು.

ಅಂತಿಮ ಹಂತದ ಪ್ರಚಾರ ಹಿನ್ನೆಲೆಯಲ್ಲಿ ನಿತೀಶ್​ ಈ ಮಾತುಗಳನ್ನಾಡಿದರು. ಬಿಹಾರದ ಮೂರನೇ ಅಥವಾ ಅಂತಿಮ ಹಂತದ ಚುನಾವಣೆ ನ. 7ರಂದು ನಡೆಯಲಿದ್ದು, ಬಿಹಾರದ ಗದ್ದುಗೆ ಯಾರು ಏರಲಿದ್ದಾರೆ ಎಂಬುದು ನ. 10ರಂದು ನಿರ್ಧಾರವಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net