BiggBoss ಮನೆಗೆ ರೀಎಂಟ್ರಿ ಕೊಟ್ರು ಹಳೇ ಕಂಟೆಸ್ಟಂಟ್ಸ್​; ಪ್ರಮುಖವಾಗಿ ಮಾತನಾಡಿದ್ದು ಇವರೊಬ್ಬರ ಬಗ್ಗೆ ಮಾತ್ರ!

BBKS 11
Published on

ಬೆಂಗಳೂರು: ಕನ್ನಡ ಕುರಿತೆರೆಯ ಪ್ರಖ್ಯಾತ ರಿಯಾಲಿಟಿ ಶೋ ಬಿಗ್​ಬಾಸ್​ (BiggBoss) ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಶೋ ರೋಚಕತೆ ಹೆಚ್ಚಿಸುತ್ತಿದೆ. ಇನ್ನೂ ಫಿನಾಲೆ ವಾರ ಹತ್ತಿರ ಬರುತ್ತಿದ್ದಂತೆ ಕಾರ್ಯಕ್ರಮವು ಹೊಸರೂಪ ಪಡೆದುಕೊಳ್ಳುತ್ತಿದ್ದು, ಇದೀಗ 11ನೇ ಆವೃತ್ತಿಯಲ್ಲಿ ಎಲಿಮಿನೇಟ್​ ಆಗಿದ್ದ ಸ್ಫರ್ಧಿಗಳು ಮನೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ವಾಹಿನಿಯು ಇದರ ಪ್ರೋಮೋವನ್ನು ರಿಲೀಸ್​ ಮಾಡಿದ್ದು, ಇಂದಿನ ಸಂಚಿಕೆ ಭರ್ಜರಿ ಎಂಟರ್​ಟೈನ್​ಮೆಂಟ್​ ಕೊಡುವುದು ಪಕ್ಕಾ ಆಗಿದೆ.

ನೆನಪಿನ ಮೂಟೆ ಹೊತ್ತು ತಂದ ಹಳೆ ಕಂಟೆಸ್ಟೆಂಟ್ಸ್! ಶೀರ್ಷಿಯಡಿ ರಿಲೀಸ್​ ಆಗಿರುವ ಪ್ರೋಮೋ ನೋಡುವುದಾದರೆ ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್​ ಆಗಿದ್ದ ಯಮುನಾ ಶ್ರೀನಿಧಿ, ಹಂಸಾ, ರಂಜಿತ್, ಅನುಷಾ ರೈ, ಮಾನಸ, ಗೋಲ್ಡ್​ ಸುರೇಶ್​ ಹಾಗೂ ಶಿಶಿರ್​ ಸೇರಿದಂತೆ ಮೊದಲಾದ ಸ್ಪರ್ಧಿಗಳು ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಇರುವ 9 ಸ್ಫರ್ಧಿಗಳ ಪೈಕಿ ಓರ್ವ ಅಭ್ಯರ್ಥಿಯ ಬಗ್ಗೆಯೂ ಇವರುಗಳು ಮಾತನಾಡಿದ್ದು, ಅದಕ್ಕೆ ಕಾರಣವನ್ನು ನೀಡಿದ್ದಾರೆ. ಆದರೆ, ಪ್ರೋಮೋದಲ್ಲಿ ಧರ್ಮ ಕೀರ್ತಿರಾಜ್ ಹಾಗೂ ಜಗದೀಶ್​ ಕಾಣಿಸಿಕೊಂಡಿಲ್ಲ. ಇವರಿಬ್ಬರು ಬಂದಿರುವುದು ಅನುಮಾನ ಎನ್ನಲಾಗುತ್ತಿದೆ.

ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್​ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net