BiggBoss ಮನೆಯಿಂದ ಹೊರಬರೋದು ಯಾರು? ಒಬ್ಬರು ಫಿಕ್ಸ್​, ಕಿಚ್ಚನ ಪಂಚಾಯ್ತಿ ಮೇಲೆ ಎಲ್ಲರ ಕಣ್ಣು

BBKS 11
Published on

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ (BiggBoss) ಶುರುವಾಗಿ 13 ವಾರಗಳು ಕಳೆದಿದ್ದು, ವಾರ ಕಳೆದಂತೆ ಶೋ ರೋಚಕತೆ ಹೆಚ್ಚಿಸುತ್ತಿದೆ. ಇನ್ಣೂ ಈ ವಾರದ ಟಾಸ್ಕ್​ ವಿಚಾರಕ್ಕೆ ಬರುವುದಾದರೆ ಬಿಗ್​ಬಾಸ್​ ಮನೆಯನ್ನು ರೆಸಾರ್ಟ್​ ಆಗಿ ಪರಿವರ್ತಿಸಲಾಗಿದ್ದು, ಈ ಟಾಸ್ಕ್​ನಲ್ಲಿ ಭವ್ಯಾ ಅವರ ತಂಡ ಗೆದ್ದು, ಭವ್ಯಾ ಅವರೇ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಭವ್ಯಾ ಅವರು ಮೋಸ ಎಸಗಿದ್ಧಾರೆ ಎಂಬ ಆರೋಪ ಕೇಳಿ ಬಂದಿದ್ದು, ಇಂದು ನಡೆಯುವ ಕಿಚ್ಚನ ಪಂಚಾಯಿತಿಯಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ.

ಇನ್ನೂ ನಾಮಿನೇಷನ್ ವಿಚಾರಕ್ಕೆ ಬರುವುದಾದರೆ ಈ ವಾರ ಮೆನಯಲ್ಲಿ ಒಟ್ಟು 08ಮಂದಿ ನಾಮಿನೇಟ್​ ಆಗಿದ್ದು, ಅದರಂತೆ  ಮಂಜು, ಧನರಾಜ್, ಹನುಮಂತ, ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಮೋಕ್ಷಿತಾ, ತ್ರಿವಿಕ್ರಂ ಹಾಗೂ ಐಶ್ವರ್ಯಾ ಶಿಂಧೋಗಿ ಮೇಲೆ ಎಲಿನಿನೇಷನ್​ ತೂಗುಗತ್ತಿ ನೇತಾಡುತ್ತಿದೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಈ ವಾರ ಡಬಲ್ ಎಲಿಮಿನೇಷನ್​ ನಡೆಯಲಿದೆ ಎಂದು ವರದಿಯಾಗಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಶನಿವಾರದ ಸಂಚಿಕೆಯಲ್ಲಿ ಇಬ್ಬರು ಸ್ಫರ್ಧಿಗಳನ್ನು ಸೇವ್​ ಮಾಡಲಾಗಿದ್ದು, ಉಳಿದ ಆರು ಮಂದಿಯ ಪೈಕಿ ನಾಲ್ವರುನ್ನು ಭಾನುವಾರದ ಸಂಚಿಕೆಯಲ್ಲಿ ಉಳಿಸಲಾಗುತ್ತದೆ ಎಂದು ಹೇಳಲಾಗಿದೆ. ಫಿನಾಲೆಗೆ ಇನ್ನೂ ಕೆಲವೇ ವಾರಗಳು ಬಾಕಿ ಉಳಿದಿದ್ದು, ಈ ನಡುವೆ ಏನೆಲ್ಲಾ ಬೆಳವಣಿಗೆಯಾಗಲಿದೆ ಎಂದು ಕಾದು ನೋಡಬೇಕಿದೆ. ಕೇಳಿ ಬಂದಿರುವ ಮಾಹಿತಿ ಪ್ರಕಾರ ಐಶ್ವರ್ಯಾ ಎಲಿಮಿನೇಟ್​ ಆಗಲಿದ್ದಾರೆ ಎಂದು ಹೇಳಲಾಗಿದ್ದು, ಇವರ ಜೊತೆ ಇನ್ನೋರ್ವ ಸ್ಫರ್ಧಿ ಯಾರು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್​ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net