ಬಿಗ್​​​ಬಾಸ್​​​ನಲ್ಲಿ ವೋಟಿಂಗ್​ ಫೇಕ್-ರಿಯಲ್​​?; ಮೈಕಲ್ ಶಾಕಿಂಗ್​ ಹೇಳಿಕೆ

Michael
Published on

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 10 ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿಯಿದ್ದು, ದೊಡ್ಮನೆಯಿಂದ ಮೈಕಲ್​ ಎಲಿಮಿನೇಟ್​ ಆಗಿದ್ದಾರೆ.

ಮನೆಯಿಂದ ಹೊರಬಂದ ಬಳಿಕ ಬಿಗ್​ಬಾಸ್​ ಸ್ಫರ್ಧಿ ಮೈಕಲ್ 'ವಿಜಯವಾಣಿ' ಜೊತೆ​ ಹಲವು ವಿಚಾರಗಳನ್ನು ಹಂಚಿಕೊಂಡಿದ್ದು, ಮಾತನಾಡುವ ವೇಳೆ ಬಿಗ್​ಬಾಸ್​ ವೋಟಿಂಗ್​ ಫೇಕಾ-ರಿಯಲ್​​ ಎಂಬುದನ್ನು ಬಹಿರಂಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಮೈಕಲ್​ ಬಿಗ್​ಬಾಸ್​ ವೋಟಿಂಗ್​ ನನಗೆ ಪ್ರಾಮಾಣಿಕ ಎನ್ನಿಸಿದೆ. ಹೊರಗಡೆ ಬಂದ ಮೇಲೆ ನನಗೆ ಜನಬೆಂಬಲ ನೋಡಿ ಆಶ್ಚರ್ಯವಾಗಿದೆ. ವೋಟಿಂಗ್​ ಪ್ರೊಸೆಸ್ ನಿಜವಾಗಿದ್ದು,​ ನನಗೇನು ಫೇಕ್​ ಅನ್ನಿಸಿಲ್ಲಾ. ಜನರು ಪ್ರೀತಿಯಿಂದ ವೋಟ್​ ಮಾಡಿರುವುದು ನಿಜ ಎಂದು ಹೇಳಿದ್ದಾರೆ.

ಬಿಗ್​ಬಾಸ್​ ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿಯಿದ್ದು, ಸ್ಫರ್ಧಿಗಳು ಗೆಲ್ಲಬೇಕೆಂಬ ಹಂಬಲದೊಂದಿಗೆ ಒಂದಿಲ್ಲೊಂದು ಸ್ಟ್ರಾಟರ್ಜಿ ಮಾಡುತ್ತಿದ್ದಾರೆ. ವಿನಯ್​ ಗೌಡ, ಸಂಗೀತಾ ಶೃಂಗೇರಿ, ಕಾರ್ತಿಕ್, ಡ್ರೋನ್​ ಪ್ರತಾಪ್​, ತನಿಷಾ ಕುಪ್ಪಂಡ, ತುಕಾಲಿ ಸಂತೋಷ್​, ವರ್ತೂರು ಸಂತೋಷ್​ ಹಾಗೂ ನಮ್ರತಾ ಗೌಡ ಯಾರು ಟಾಪ್​ ಐದು ಸ್ಫರ್ಧಿಗಳಾಗಲಿದ್ದಾರೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net