More

    ಪೊಲೀಸರ ಭರ್ಜರಿ ಕಾರ್ಯಾಚರಣೆ; 100 ಕೋಟಿ ಮೌಲ್ಯದ ಡ್ರಗ್ಸ್​, ನಾಲ್ವರು ವಶಕ್ಕೆ

    ಗುವಾಹಟಿ: ಅತಿದೊಡ್ಡ ಮಾದಕವಸ್ತು ಕಳ್ಳಸಾಗಾಣೆ ಪ್ರಕರಣ ಒಂದನ್ನು ಬೇದಿಸಿರುವ ಅಸ್ಸಾಂ ಪೊಲೀಸರು 100 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್​ ಹಾಗೂ ನಾಲ್ವರುನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯು ಅಸ್ಸಾಂನ ಕರೀಮ್​ಗಂಜ್​ ಜಿಲ್ಲೆಯಲ್ಲಿ ನಡೆದಿದೆ.

    ಅಸ್ಸಾಂ ಪೊಲೀಸ್‌ನ ವಿಶೇಷ ಕಾರ್ಯ ಪಡೆ(STF) ಮತ್ತು ಕರೀಮ್‌ಗಂಜ್ ಜಿಲ್ಲಾ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಡ್ರಗ್ಸ್ ಜಪ್ತಿ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಜನರ ಬಂಧನವಾಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: BTS ಭೇಟಿಯಾಗಲು ಮನೆ ಬಿಟ್ಟ ಹೋದ ಬಾಲಕಿಯರಿಗೆ ಕಾದಿತ್ತು ಶಾಕ್​!

    ಈ ಕುರಿತು ಪ್ರತಿಕ್ರಿಯಿಸಿರುವ STF ಡಿಐಜಿ ಪಾರ್ಥಸಾರಥಿ ಮಹಾಂತ, ಮಿಜೋರಾಂನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್​ ಕಳ್ಳಸಾಗಾಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ನೀಲಂ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಪ್ರಕಂಡಿ ಬಳಿ ಮಧ್ಯಾಹ್ನ 2:15ರ ಸುಮಾರಿಗೆ ಒಂದು ಕಾರನ್ನು ನಾವು ತಡೆದು ತಪಾಸಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

    ಬಂಧಿತರಿಂದ 5.1 ಕೆ.ಜಿ ಹೆರಾಯಿನ್, 64,000 ಯಬಾ ಟ್ಯಾಬ್ಲೆಟ್ಸ್ ಮತ್ತು ನಾಲ್ಕು ಪ್ಯಾಕ್ ವಿದೇಶಿ ಸಿಗರೇಟ್ ಪತ್ತೆಯಾಗಿದೆ. ಮೂವರು ಆರೋಪಿಗಳು ಮಿಜೋರಾಂ ಮೂಲದವರಾಗಿದ್ದು, ಓರ್ವ ಅಸ್ಸಾಂನ ಕರೀಮ್​ಗಂಜ್​ನವನು ಎಂದು ತಿಳಿದು ಬಂದಿದೆ. ವಶಪಡಿಸಿಕೊಂಡ ಡ್ರಗ್ಸ್ ಮೌಲ್ಯ ಸುಮಾರು ₹100 ಕೋಟಿಯಾಗಿದ್ದು, ಈಶಾನ್ಯ ಭಾರತದಲ್ಲಿ ಈವರೆಗೆ ಜಪ್ತಿಯಾದ ಅತ್ಯಧಿಕ ಮೌಲ್ಯದ ಡ್ರಗ್ಸ್ ಇದಾಗಿದೆ ಎಂದು STF ಡಿಐಜಿ ಪಾರ್ಥಸಾರಥಿ ಮಹಾಂತ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts