More

    ಫಿನಾಲೆ ತಲುಪಲು ಭರ್ಜರಿ ಆಫರ್​ ನೀಡಿದ ಬಿಗ್​ಬಾಸ್​; ಸ್ಫರ್ಧಿಗಳ ನಡುವೆ ಶುರುವಾಯ್ತು ಭಾರೀ ಪೈಪೋಟಿ

    ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 10 ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿಯಿದ್ದು, ಸ್ಫರ್ಧಿಗಳು ಗೆಲ್ಲಬೇಕೆಂಬ ಹಂಬಲದೊಂದಿಗೆ ಒಂದಿಲ್ಲೊಂದು ಸ್ಟ್ರಾಟರ್ಜಿ ಮಾಡುತ್ತಿದ್ದಾರೆ.

    ಫಿನಾಲೆಯ ಹೊಸ್ತಿಲಲ್ಲಿ ಸ್ಫರ್ಧಿಗಳಿಗೆ ಕಠಿಣ ಟಾಸ್ಕ್​ ನೀಡುತ್ತಿರುವ ಬಿಗ್​ಬಾಸ್​ ಈಗ ಹೊಸ ಆಫರ್​ ಒಂದನ್ನು ನೀಡಿದ್ದಾರೆ. ಈ ವಾರದ ಟಾಸ್ಕ್​ಗಳನ್ನು ಗೆದ್ದು, ವಾರದ ಕೊನೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಸದಸ್ಯರ ಪೈಕಿ ಒಬ್ಬರು ಫಿನಾಲೆಗೆ ನೇರವಾಗಿ ಟಿಕೆಟ್​ ಪಡೆಯುತ್ತಾರೆ ಎಂದು ಘೋಷಿಸಲಾಗಿದೆ.

    ಬಿಗ್​ಬಾಸ್​ನ ಈ ಘೋಷಣೆ ಬೆನ್ನಲ್ಲೇ ಮನೆಯಲ್ಲಿರುವ ಸ್ಫರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದ್ದು, ಟಾಸ್ಕ್​ಗಳಲ್ಲಿ ಗೆದ್ದು ಯಾವ ಸ್ಫರ್ಧಿ ನೇರವಾಗಿ ಫೈನಲ್​ಗೆ ಟಿಕೆಟ್​ ಪಡೆಯಲಿದ್ದಾರೆ ಎಂದು ಕಾದು ನೋಡಬೇಕಿದೆ. ವಿನಯ್​ ಗೌಡ, ಸಂಗೀತಾ ಶೃಂಗೇರಿ, ಕಾರ್ತಿಕ್, ಡ್ರೋನ್​ ಪ್ರತಾಪ್​, ತನಿಷಾ ಕುಪ್ಪಂಡ, ತುಕಾಲಿ ಸಂತೋಷ್​, ವರ್ತೂರು ಸಂತೋಷ್​ ಹಾಗೂ ನಮ್ರತಾ ಗೌಡ ಯಾರು ಫಿನಾಲೆಗೆ ಮೊದಲು ಟಿಕೆಟ್​ ಪಡೆಯಲಿದ್ದಾರೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts