Bigg Boss 8 Tamil: ಸೀಸನ್ 8 ಶುರು.. ನಿರೂಪಕರಾಗಿ ವಿಜಯ್ ಸೇತುಪತಿ!

big boss tamil 8 (1)
Published on

ಚೆನ್ನೈ: ಬಿಗ್ ಬಾಸ್ ರಿಯಾಲಿಟಿ ಶೋ ಭಾರತದಲ್ಲಿ ಭಾರಿ ಹಿಟ್ ಆಗಿರುವುದು ಗೊತ್ತೇ ಇದೆ. ಮೊದಲು ಹಿಂದಿಯಲ್ಲಿ ಆರಂಭವಾದ ಈ ಶೋ ನಂತರ ದಕ್ಷಿಣದ ಭಾಷೆಗಳಲ್ಲೂ ಶುರುವಾಗಿ ಸೂಪರ್ ಹಿಟ್ ಆಗಿದೆ. ಸದ್ಯ ಕನ್ನಡದಲ್ಲಿ ಈ ಶೋಗೆ ಉತ್ತಮ ಫಾಲೋಯಿಂಗ್ ಇದ್ದು, 11 ಸೀಸನ್​ ಶುರುವಾಗಿದ್ದು, ತೆಲುಗು ಮತ್ತು ತಮಿಳಿನಲ್ಲಿ 8ನೇ ಸೀಸನ್(Bigg Boss 8 Tamil) ಶುರುವಾಗಿದೆ. ಈ ಭಾನುವಾರ (ಅಕ್ಟೋಬರ್ 6) ಬಿಗ್ ಬಾಸ್ ತಮಿಳು 8 ನೇ ಸೀಸನ್ ಅದ್ದೂರಿಯಾಗಿ ಲಾಂಚ್ ಆಗಿದೆ.

ಬಿಗ್ ಬಾಸ್ ತಮಿಳು ಎಂದಾಕ್ಷಣ ಎಲ್ಲರಿಗೂ ನೆನಪಾಗುವ ಹೆಸರು ಕಮಲ್ ಹಾಸನ್. ಯಾಕೆಂದರೆ ಇಲ್ಲಿಯವರೆಗೆ ನಡೆದ 7 ಸೀಸನ್ ಗಳಿಗೆ ಕಮಲ್ ಹಾಸನ್ ಹೋಸ್ಟ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಸೀಸನ್ 8 ಕ್ಕೆ, ಹಿರಿಯ ನಟ ವಿಜಯ್ ಸೇತುಪತಿ ನಿರೂಪಕರಾಗಿ ಅಧಿಕಾರ ವಹಿಸಿಕೊಂಡರು. ಇಲ್ಲಿಯವರೆಗೂ ಕಮಲ್ ನೋಡಿದ ಕಿರುತೆರೆ ಪ್ರೇಕ್ಷಕರು ವಿಜಯ್ ಸೇತುಪತಿಯನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

ಆದರೆ ಇದುವರೆಗೂ 'ಸ್ಟಾರ್ ವಿಜಯ್' ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋಗಳನ್ನು ನೋಡಿದರೆ ವಿಜಯ್ ಅವರೇ ಹೋಸ್ಟ್ ಮಾಡುತ್ತಾರೆ ಎಂಬುದು ನಿಕ್ಕಿಯಾಗಿತ್ತು.

ಇತ್ತೀಚೆಗಷ್ಟೇ ಬಿಡುಗಡೆಯಾದ ಗ್ರ್ಯಾಂಡ್ ಲಾಂಚ್ ಪ್ರೋಮೋದಲ್ಲಿ ವಿಜಯ್ ಸೇತುಪತಿಯ ಸೂಟ್ ನಲ್ಲಿ ನಡೆಯುತ್ತಿರುವುದು ಅಭಿಮಾನಿಗಳಿಗೆ ಫುಲ್ ಕಿಕ್ ಆಗಿದೆಯಂತೆ. ‘ವೇದಿಕೆ ಸಿದ್ಧವಾಗಿದೆ, ಮನೆ ಸಿದ್ಧವಾಗಿದೆ, ಸ್ಪರ್ಧಿಗಳು ಸಿದ್ಧರಾಗಿದ್ದಾರೆ... ಬಿಗ್ ಬಾಸ್ ಸೀಸನ್ 8 ಹೊಸ ರೀತಿಯಲ್ಲಿ, ಹೊಸ ತಂತ್ರಗಳೊಂದಿಗೆ ನಿಮ್ಮ ಮುಂದೆ ಬರುತ್ತಿದೆ’ ಎಂದು ವಿಜಯ್ ಸೇತುಪತಿ ಅವರ ಡೈಲಾಗ್‌ಗಳು ಪ್ರೋಮೋದಲ್ಲಿವೆ.

ಸದ್ಯ ಈ ಪ್ರೋಮೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಜಯ್ ಸೇತುಪತಿ ಹ್ಯಾಶ್‌ಟ್ಯಾಗ್ ರಾಷ್ಟ್ರವ್ಯಾಪಿ ಟ್ರೆಂಡಿಂಗ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net