ಬಿದರೆ ಅಗ್ರಹಾರ ಕೆರೆ ಪುನರುಜ್ಜೀವನ

Lake
Published on

ಬೆಂಗಳೂರು: ಆಲ್ಸ್ಟಂ ಇಂಡಿಯಾ ಸಂಸ್ಥೆ 'ವೇಕ್​ ದಿ ಲೇಕ್​' ಯೋಜನೆ ಮೂಲಕ ಪೂರ್ವ ಭಾಗದ ದೊಡ್ಡಬಾನಹಳ್ಳಿ ಗ್ರಾಮದಲ್ಲಿರುವ ಬಿದರೆ ಅಗ್ರಹಾರ ಕೆರೆಯನ್ನು ಯುನೈಟೆಡ್​ ವೇ ಆಫ್​ ಬೆಂಗಳೂರು ಸಹಯೋಗದಲ್ಲಿ ಪುನರುಜ್ಜೀವನಗೊಳಿಸಿದೆ.

ಕೆರೆಯಲ್ಲಿ ತುಂಬಿದ್ದ ಹೂಳು ಹೊರತೆಗೆಯಲಾಗಿದೆ. ಇದೀಗ 18 ಕೋಟಿ ಲೀಟರ್​ ನೀರು ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಾಗಲಿದೆ. ಜತೆಗೆ ಸುತ್ತಮುತ್ತಲ ಪರಿಸರದಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಲಿದೆ.

ನಗರೀಕರಣ, ಜನಸಂಖ್ಯೆ ಹೆಚ್ಚಳ ಹಾಗೂ ಬದಲಾಗುತ್ತಿರುವ ವಾತಾವರಣದ ಪರಿಣಾಮವಾಗಿ ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಎದುರಾಗುತ್ತಿದೆ. ಇದು ಆತಂಕಕಾರಿಯಾಗಿದ್ದು, ಕೆರೆಗಳೂ ಬತ್ತುತ್ತಿವೆ. ಜಲ ಸಮಸ್ಯೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಆಲ್ಸ್ಟಂ ಇಂಡಿಯಾ ಸಾಮಾಜಿಕ ಕಾರ್ಯ ಕೈಗೆತ್ತಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net