ಫುಡ್​ ಡೆಲಿವರಿ ಮಾಡುತ್ತಿದ್ದ ವ್ಯಕ್ತಿಗೆ ಟ್ವಿಟ್ಟರ್​ ಸಹಾಯದಿಂದ ಸಿಕ್ಕಿತು ಬೈಕ್​​ !

Bike
Published on

ಜೈಪುರ: ಪ್ರತಿ ದಿನ ಸೈಕಲ್​ ಮೂಲಕವೇ ಫುಡ್​ ಡೆಲಿವರಿ ಮಾಡುತ್ತಿದ್ದ ವ್ಯಕ್ತಿಗೆ ಇದೀಗ ಬೈಕ್​ ಉಡುಗೊರೆಯಾಗಿ ಸಿಕ್ಕಿದೆ.

ರಾಜಸ್ಥಾನದಲ್ಲಿ ಬಿರು ಬಿಸಿಲಿರುವುದರಿಂದ  ಆದಿತ್ಯ ಶರ್ಮಾ ಎಂಬುವವರು ಫುಡ್​​ ಬುಕ್ ಮಾಡಿದ್ದರು.  ದುರ್ಗಾ ಮೀನಾ 31 ವರ್ಷದ ವ್ಯಕ್ತಿ ಸೈಕಲ್​ ಮೂಲಕ ಫುಡ್​ ಡೆಲಿವರಿ ಮಾಡಿದ್ದರು.

ಇಷ್ಟು ಬಿರುಬಿಸಿಲಿನಲ್ಲಿ ಈ ವ್ಯಕ್ತಿ ಸೈಕಲ್​ ಮೂಲಕವೇ ಫುಡ್ ಡೆಲಿವರಿ ಮಾಡಿದ್ದಾರೆ ಇವರಿಗೆ ಬೈಕ್​ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಆದಿತ್ಯ ಶರ್ಮಾ ಮಾಡಿದ ಒಂದು ಟ್ವಿಟ್​​ ಈ ವ್ಯಕ್ತಿಯ ಬದುಕನ್ನೇ ಬದಲಾಯಿಸಿದೆ.

ಸೈಕಲ್​ ಮೂಲಕ ಫುಡ್ ಡೆಲಿವರಿ ಮಾಡಿ ತಿಂಗಳಿಗೆ ಕೇವಲ 10 ಸಾವಿರ ರೂ.ಮಾತ್ರ ಗಳಿಸುತ್ತಿದ್ದ ಈ ವ್ಯಕ್ತಿ ಈಗ ಬೈಕ್​ನಿಂದ ಹೆಚ್ಚು ಹಣ ಗಳಿಸಲು ಸಹಾಯವಾಗಿದೆ.ಆದರೆ ಕೇವಲ ಒಂದು ಟ್ವೀಟ್​ ಈ ವ್ಯಕ್ತಿಗೆ ದೊಡ್ಡ ಸಹಾಯವನ್ನೇ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net