

ಬೆಂಗಳೂರು: ಸೋಶಿಯಲ್ ಮೀಡಿಯಾ ಮೂಲಕ ಸದಾ ಸುದ್ದಿಯಲ್ಲಿರುವ ಭೂಮಿ ಶೆಟ್ಟಿ ಇದೀಗ ಬೋಲ್ಡ್ ಫೋಟೋ ಶೂಟ್ ಮಾಡಿಸುವ ಮೂಲಕ ಸದ್ದು ಮಾಡುತ್ತಿದ್ದಾರೆ. ತುಂಡು ಬಟ್ಟೆ ತೊಟ್ಟ ಭೂಮಿಕಾ ಫೋಟೋಸ್ಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.
ಕಿನ್ನರಿ ಧಾರಾವಾಹಿ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ನಟಿ ಭೂಮಿಕಾ ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ಹೆಸರುವಾಸಿಯಾಗಿದ್ದಾರೆ. ಕಿನ್ನರಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ಭೂಮಿಕಾ ಶೆಟ್ಟಿ ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಸಿದ್ದರು. ಬಿಗ್‌ಬಾಸ್ ಭೂಮಿಕಾಗೆ ಹೈಪ್ ನೀಡಿತು.
ʼಇಕ್ಕಟ್ʼ ಸಿನಿಮಾದ ಮೂಲಕ ಮುನ್ನೆಲೆಗೆ ಬಂದಿದ್ದ ನಟಿ, ತೆಲುಗು ಸಿನಿರಂಗದಲ್ಲಿಯೂ ಸಖತ್ ಫೇಮಸ್. ʼನಿನ್ನೆ ಪೆಲ್ಲಡತಾʼ ʼಅಕ್ಕ ಚೆಲ್ಲಲ್ಲುʼ ಧಾರಾವಾಹಿ ಮೂಲಕ ತೆಲುಗು ಕಿರುತೆರೆ ಪ್ರೇಕ್ಷಕರಿಗೆ ಭೂಮಿಕಾ ಪರಿಚಯವಾದರು. ಕುಂದಾಪುರದಲ್ಲಿ ಹುಟ್ಟಿ ಬೆಳೆದಿರುವ ಭೂಮಿ ಶೆಟ್ಟಿಗೆ ಬೈಕ್ ರೈಡ್ ಅಂದ್ರೆ ತುಂಬಾ ಇಷ್ಟ. ಆಗಾಗ ಒಬ್ಬರೇ ಲಾಂಗ್ ರೈಡ್‌ಗೆ ಹೋಗುತ್ತಿರುತ್ತಾರೆ. ಸಧ್ಯ ಭೂಮಿಕಾ ಶೇರ್ ಮಾಡಿರುವ ಫೋಟೋಸ್ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಬೋಲ್ಡ್ ಆಗಿಯೇ ಎಕ್ಸ್‌ಪೀರಿಮೆಂಟ್ ಮಾಡುತ್ತಿರುತ್ತಾರೆ ನಟಿ ಭೂಮಿ ಶೆಟ್ಟಿ. ಅದರಲ್ಲೂ ಬಗೆಬಗೆ ಫೋಟೋಗಳನ್ನು ಶೇರ್ ಮಾಡಿಕೊಂಡೇ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಹಿಪ್ಪಿ ಹೇರ್‌ಸ್ಟೈಲ್‌ನಲ್ಲಿ ಮಿಂಚಿದ್ದರು ಈ ನಟಿ. ಈಗ ಬಿರು ಬೇಸಿಗೆಯಲ್ಲಿ ಮತ್ತಷ್ಟು ಹಾಟ್ ಅವತಾರದಲ್ಲಿ ಎದುರಾಗಿದ್ದಾರೆ.
ಹಾಟ್ ಅವತಾರದಲ್ಲಿ ಎದೆ ಮುಚ್ಚುವ ತುಂಡು ಉಡುಗೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಭೂಮಿ ಶೆಟ್ಟಿ ಹೀಗೆ ಫೋಟೋ ಹಂಚಿಕೊಳ್ಳುತ್ತಿದ್ದಂತೆ, ತರಹೇವಾರಿ ಕಾಮೆಂಟ್‌ಗಳು ನೆಟ್ಟಿಗ ವಲಯದಿಂದ ಸಂದಾಯವಾಗಿವೆ. ಕೆಲವರು ಭೂಮಿ ಶೆಟ್ಟಿಯ ಹಾಟ್ ಅವತಾರವನ್ನು ಬಾಲಿವುಡ್‌ನ ಊರ್ಫಿ ಜಾವೇದ್‌ಗೆ ಹೋಲಿಸಿ, ಇವರು ಕನ್ನಡದ ಊರ್ಫಿ ಎಂದಿದ್ದಾರೆ. ಕೆಲವರು ನೆಗೆಟಿವ್ ಕಾಮೆಂಟ್ ಹಾಕಿದ್ದಾರೆ.