ಶುಭಾಶಯ ಕೋರುವ ಧಾವಂತದಲ್ಲಿ ಎಡಿಜಿಪಿ ಭಾಸ್ಕರ್ ರಾವ್ ಯಡವಟ್ಟು

bhaskar rao
Published on

ಬೆಂಗಳೂರು: ಶುಭಾಶಯ ಕೋರುವ ಧಾವಂತದಲ್ಲಿ ಎಡಿಜಿಪಿ ಭಾಸ್ಕರ್ ರಾವ್ ಅವರು ಯಡವಟ್ಟು ಮಾಡಿಕೊಂಡಿದ್ದಾರೆ. ವಿಶ್ವ ಕುಸ್ತಿ ಚಾಂಪಿಯನ್​​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಪ್ರಿಯಾ ಮಲಿಕ್ ಒಲಿಂಪಿಕ್ಸ್​ನಲ್ಲೇ ಚಿನ್ನ ಗೆದ್ದಿದ್ದಾರೆಂದು ಶುಭಾಶಯ ತಿಳಿಸಿದ್ದಾರೆ.

ಸದ್ಯ ಒಲಿಪಿಂಕ್ಸ್​ ಕಡೆ ಎಲ್ಲರ ಗಮನವಿದೆ. ಅದರಲ್ಲೂ ಭಾನುವಾರದಂದು ಮಣಿಪುರ ಮೀರಾಬಾಯಿ ವೇಟ್​ ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೇಲಂತೂ ಒಲಿಂಪಿಕ್ಸ್ ಕ್ರೇಜ್ ಇನ್ನೂ ಹೆಚ್ಚಾಗಿದೆ ಎಂದೇ ಹೇಳಬಹುದು. ಇದೇ ಸಮಯದಲ್ಲಿ ವಿಶ್ವ ಕುಸ್ತಿ ಚಾಂಪಿಯನ್​ಶಿಪ್ ಕೂಡ ನಡೆದಿದ್ದು, ಅದರಲ್ಲಿ ಭಾರತದ ಪ್ರಿಯಾ ಮಲಿಕ್ ಜಯಭೇರಿ ಬಾರಿಸಿದ್ದಾರೆ.

ಸೋಮವಾರದಂದು ಪ್ರಿಯಾ ಮಲಿಕ್ ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಜಯ ಸಾಧಿಸಿದ ನಂತರ ಅನೇಕರು ಅವರಿಗೆ ವಿಶ್ ಮಾಡಿದ್ದಾರೆ. ಆಕೆ ಒಲಿಂಪಿಕ್ಸ್​ನಲ್ಲೇ ಗೆದ್ದಿದ್ದಾರೆಂದು ತಪ್ಪು ತಿಳಿದು ಶುಭಾಶಯ ತಿಳಿಸಿದವರೂ ಇದ್ದಾರೆ. ಅದೇ ರೀತಿ ಎಡಿಜಿಪಿ ಭಾಸ್ಕರ್ ರಾವ್​ ಕೂಡ ತಪ್ಪು ತಿಳಿದು ಟ್ವೀಟ್ ಮಾಡಿದ್ದರು. ಪ್ರಿಯಾ ಒಲಿಂಪಿಕ್ಸ್​ನಲ್ಲಿ ಗೆದ್ದಿದ್ದಾರೆ ಎನ್ನುವ ಬರಹವಿದ್ದ ಫೋಟೋವೊಂದನ್ನು ಹಂಚಿಕೊಂಡು ಅವರಿಗೆ ಶುಭಾಶಯ ತಿಳಿಸಿದ್ದರು.

ಆದರೆ ಅದು ತಪ್ಪು ಎಂದು ತಿಳಿಯುತ್ತಿದ್ದಂತೆ ಭಾಸ್ಕರ್ ರಾವ್ ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ. ನಾನು ಟ್ವೀಟ್ ಮಾಡುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳಬೇಕಿತ್ತು. ಅದೇನೇ ಇರಲಿ, ಒಲಿಂಪಿಕ್ಸ್​ನಲ್ಲಿರುವ ನಮ್​ ಟೀಂಗೆ ಶುಭವಾಗಲಿ ಎಂದು ಅವರು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net