#BBK8: ಬಿಗ್​ಬಾಸ್ ಮನೆಯಲ್ಲಿ ಇಂದು ಎಲಿಮಿನೇಟ್ ಆದವರು ಇವರೇ.. ಮನೆ ಮಂದಿಗೆ ಶಾಕ್!

bb2
Published on

ಬೆಂಗಳೂರು: ಬಿಗ್​ಬಾಸ್ ಸೀಸನ್ 8ರ ಎರಡನೇ ಇನ್ನಿಂಗ್ಸ್​ ಇನ್ನೆರೆಡು ವಾರಗಳ ಕಾಲ ನಡೆಯಲಿದೆ. ಫೈನಲ್ಸ್ ಹತ್ತಿರದಲ್ಲಿರುವಾಗ ಮನೆಯಿಂದ ಜನರನ್ನು ಕಡಿಮೆ ಮಾಡಬೇಕಾದ ಜವಾಬ್ದಾರಿ ಕಿಚ್ಚನ ಹೆಗಲ ಮೇಲಿದೆ. ಆದರೆ ಈ ವಾರ ಎಲಿಮಿನೇಟ್ ಆದವರು ಎಂದು ಕೇಳಿದರೆ ನೀವು ಶಾಕ್ ಆಗುತ್ತೀರಿ.

ದಿವ್ಯಾ ಉರುಡುಗ, ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ, ಶುಭಾ ಪೂಂಜಾ ಮತ್ತು ಶಮಂತ್ ಬ್ರೋ ಗೌಡ್ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರು ಅಥವಾ ಇಬ್ಬರನ್ನು ಇಂದು ಎಲಿಮಿನೇಟ್ ಮಾಡಲಾಗುವುದು ಎಂದು ಸುದ್ದಿ ಹರಿದಾಡಿತ್ತು. ಶಮಂತ್ ಬ್ರೋ ಗೌಡ ಮನೆಯಿಂದ ಹೊರಗೆ ಹೋಗಬಹುದು ಎನ್ನುವ ಮಾತಂತೂ ಹೆಚ್ಚಾಗಿಯೇ ಕೇಳಿಬಂದಿತ್ತು. ಇನ್ನೊಂದು ಕಡೆ ಕೆಲವು ವಿಚಾರದಲ್ಲಿ ತಪ್ಪು ಮಾಡಿ, ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿರುವ ಚಕ್ರವರ್ತಿ ಚಂದ್ರಚೂಡ್ ಕೂಡ ಔಟ್ ಆಗಬಹುದು ಎನ್ನುವ ಚರ್ಚೆ ನಡೆದಿತ್ತು. ಆದರೆ ಇದೀಗ ಎಲ್ಲವೂ ಉಲ್ಟಾ ಆಗಿದೆ.

ಮೂಲಗಳ ಪ್ರಕಾರ ಇಂದು ಬಿಗ್​ಬಾಸ್ ಮನೆಯಿಂದ ಯಾರೂ ಹೊರ ಹೋಗುತ್ತಿಲ್ಲ. ಫೈನಲ್ಸ್​ಗೆ ಇನ್ನು ಎರಡು ವಾರ ಇರುವ ಹಿನ್ನೆಲೆಯಲ್ಲಿ ಈ ವಾರ ವಿಶೇಷವಾಗಿ ಎಲಿಮಿನೇಷನ್ ಮಾಡಲಾಗುತ್ತದೆ ಎನ್ನಲಾಗಿದೆ. ಇಂದು ಯಾರನ್ನೂ ಮನೆಯಿಂದ ಹೊರಗೆ ಕರೆಯಲಾಗುವುದಿಲ್ಲ. ಆದರೆ ಈ ವಾರದಲ್ಲಿ ಒಟ್ಟು ಮೂರು ಮಂದಿಯನ್ನು ಔಟ್ ಮಾಡಲಾಗುವುದು. ವೇದಿಕೆ ಮೇಲಿಂದ ಮನೆಗೆ ಹೋಗುವ ಬದಲು ಯಾವ ರೀತಿಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳು ನೇರವಾಗಿ ಮನೆಗೆ ಹೋದರೂ ಅದೇ ರೀತಿ ಮನೆಯಿಂದ ಔಟ್ ಆಗುವ ಸ್ಪರ್ಧಿಗಳನ್ನು ಬಿಗ್​ಬಾಸ್ ಮನೆಯಿಂದ ಹೊರಗೆ ಕರೆಯುತ್ತಾರೆ ಎನ್ನಲಾಗಿದೆ.

ಅಲ್ಲಿಗೆ ಈ ವಾರ ಡಬಲ್ ಎಲಿಮಿನೇಷನ್ ಇರುವುದಿಲ್ಲ. ಬದಲಾಗಿ ಒಂದೇ ವಾರದಲ್ಲಿ ಮೂರು ಮಂದಿ ಮನೆಯಿಂದ ಹೊರಗೆ ಬರಲಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net