More

    ಮೆಟ್ರೋ ಸ್ಟೇಷನ್​ನಲ್ಲಿ ಯುವತಿಯ ಹುಚ್ಚಾಟ; ಕಾನ್​ಸ್ಟೇಬಲ್ ಧೈರ್ಯಕ್ಕೆ ಭಾರಿ ಮೆಚ್ಚುಗೆ

    ನವದೆಹಲಿ: ಕೆಲಸದ ಒತ್ತಡ ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ಯುವತಿಯೊಬ್ಬಳು ಮೆಟ್ರೋ ಸ್ಟೇಷನ್​ನಿಂದ ಹಾರಿ ಪ್ರಾಣ ಕಳೆದುಕೊಳ್ಳಲು ಪ್ರಯತ್ನಿಸಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿ ಹತ್ತಿರದ ಫರಿದಾಬಾದ್​ನಲ್ಲಿ ನಡೆದಿದೆ. ಪೊಲೀಸ್ ಕಾನ್​ಸ್ಟೇಬಲ್ ಒಬ್ಬರಿಂದಾಗಿ ಆಕೆಯ ಪ್ರಾಣ ಉಳಿಯುವಂತಾಗಿದೆ.

    ಫರಿದಾಬಾದ್​ನ ಸೆಕ್ಟರ್ 28 ಮೆಟ್ರೋ ಸ್ಟೇಷನ್​ನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಯುವತಿಯೊಬ್ಬಳು ಸ್ಟೇಷನ್​ನ ಹೊರಭಾಗದ ಗೋಡೆಯಲ್ಲಿದ್ದ ಅಡ್ಡಪಟ್ಟಿಯಲ್ಲಿ ಕುಳಿತುಕೊಂಡು, ಅಲ್ಲಿಂದ ಹಾರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಳೆ. ಮೇಲಿನಿಂದ ಮೆಟ್ರೋ ಸ್ಟೇಷನ್ ಸಿಬ್ಬಂದಿ ಅದೆಷ್ಟೇ ವಿನಂತಿ ಮಾಡಿಕೊಂಡರೂ ಆಕೆ ಅವರ ಮಾತು ಕೇಳಿಲ್ಲ.

    ಹೀಗೆ ಮಾಡುತ್ತಿರುವಾಗ ಧೈರ್ಯ ತೆಗೆದುಕೊಂಡ ಪೊಲೀಸ್ ಕಾನ್​ಸ್ಟೇಬಲ್ ಒಬ್ಬರು, ನಿಧಾನವಾಗಿ ಅವಳಿಗೆ ಗೊತ್ತಾಗದಂತೆ ಸೈಡಿನಿಂದ ಅವಳ ಬಳಿ ಬಂದಿದ್ದಾರೆ. ಹತ್ತಿರ ಬರುತ್ತಿದ್ದಂತೆ, ಯುವತಿ ಕಾನ್​ಸ್ಟೇಬಲ್ ಬರುತ್ತಿದ್ದನ್ನು ಗಮನಿಸಿದ್ದಾಳೆ. ತಕ್ಷಣ ಕಾನ್​ಸ್ಟೇಬಲ್ ವೇಗವಾಗಿ ಬಂದು ಯುವತಿಯ ಕೈ ಹಿಡಿದುಕೊಂಡಿದ್ದಾರೆ. ಅಷ್ಟರಲ್ಲಿ ಇನ್ನೊಬ್ಬ ವ್ಯಕ್ತಿ ಮೇಲಿನಿಂದ ಕೆಳಗಿಳಿದಿದ್ದಾರೆ. ಇಬ್ಬರು ಸೇರಿ ಬಲವಂತವಾಗಿ ಯುವತಿಯನ್ನು ಮೇಲೆ ಹತ್ತಿಸಲಾಗಿದೆ.

    ಸರ್ಫರಾಜ್ ಹೆಸರಿನ ಕಾನ್‌ಸ್ಟೆಬಲ್ ಧೈರ್ಯಶಾಲಿಯಾಗಿ ರಕ್ಷಣಾ ಕಾರ್ಯಾಚರಣೆ ಮಾಡಿರುವ ಬಗ್ಗೆ ಪೊಲೀಸ್ ಆಯುಕ್ತ ಒ.ಪಿ.ಸಿಂಗ್ ಪ್ರಶಂಸಿಸಿದ್ದಾರೆ. ಜೀವನವು ಹೋರಾಟದ ವಿಷಯವಾಗಿದೆ. ಎಂದಿಗೂ ತೊಂದರೆಗಳಿಂದ ಓಡಿಹೋಗಬೇಡಿ ಮತ್ತು ಈ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳಲು ಪ್ರಯತ್ನಿಸಬೇಡಿ ಎಂದು ಅವರು ಹೇಳಿದ್ದಾರೆ. ಯುವತಿಗೆ ಸಮಾಧಾನ ಮಾಡಿ ಆಕೆಯನ್ನು ಕುಟುಂಬಕ್ಕೆ ಹಸ್ತಾಂತರಿಸಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್)

    ಹಿಂದಿನಿಂದ ಯಮರೂಪದಲ್ಲಿ ಬಂದು ಡಿಕ್ಕಿ ಹೊಡೆದ ರೈಲು! ತಾಯಿ ಮಗ ಸ್ಥಳದಲ್ಲೇ ಸಾವು

    ಕ್ಯಾನ್ಸರ್​ನಿಂದ ಬಳಲುತ್ತಿದ್ದ ಸಹೋದರನ ಚಿಕಿತ್ಸೆಗಾಗಿ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ ಮಹಿಳೆ!

    ಇದ್ದಕ್ಕಿದ್ದಂತೆ ಗುಡ್ಡದಿಂದ ಕುಸಿದ ಬಂಡೆಗಳು; ಸೇತುವೆ ಮುರಿದುಬಿದ್ದು 9 ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts