ಹರಿದಾಸನ ಭಕ್ತಿ

ವಿಜಯವಾಣಿ
Published on

ಭಗವಂತನಿಗೆ ಅತ್ಯಂತ ಪ್ರಿಯವಾದದ್ದು ಯಾವುದು? ಭಗವದ್ಗೀತೆ ಹೇಳುತ್ತದೆ:

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತಯ

ಪ್ರಯಚ್ಛತಿ ತದಹಂ ಭಕ್ತಯ ಅಶ್ನಾಮಿ ಪ್ರಯತಾತ್ಮನಃ ||

ಭಗವಂತನು ಹೇಳುತ್ತಾನೆ: ನೀವು ನನಗೆ ಏನು ಕೊಟ್ಟರೂ ಪರವಾಗಿಲ್ಲ. ಅದು ಎಲೆ, ಹೂ, ಹಣ್ಣು ಅಥವಾ ಕೇವಲ ನೀರಾಗಿರಬಹುದು. ನಾನು ನೋಡುವುದು ನಿಮ್ಮ ಮನೋಭಾವ. ನನಗೆ ಮುಖ್ಯವಾದುದು ನನ್ನ ಮೇಲಿನ ನಿಮ್ಮ ಭಕ್ತಿ ಮತ್ತು ಪ್ರೀತಿ, ನನಗೆ ಶರಣಾಗುವ ನಿಮ್ಮ ಮನೋಭಾವ.

ಸಂತ ಹರಿದಾಸರು ಬಂಗಾಳದ ಯಶೋಹರ ಜಿಲ್ಲೆಯಲ್ಲಿ, ಬುಡಾನ್ ಗ್ರಾಮದ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಅವರು ಮಗುವಾಗಿದ್ದಾಗಲೇ ಅವರ ಪೋಷಕರು ನಿಧನರಾದರು. ಆದ್ದರಿಂದ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಅವರು ಅನಾಥರಾದರು. ಭಾಗವತದಲ್ಲಿ ಭಗವಂತನು ಹೀಗೆ ಉಲ್ಲೇಖಿಸಿದ್ದಾನೆ:

ಯಸ್ಯಾಹಂ ಅನುಗೃಹ್ಣಾಮಿ ಹರಿಷ್ಯೇ ತದ್ಧನಂ ಶನೈಃ ||

ಆಶೀರ್ವದಿಸಲು ಬಯಸುವವನ ಎಲ್ಲಾ ಲೌಕಿಕ ಸಂಪತ್ತನ್ನು ನಾನು ತೆಗೆದುಕೊಂಡು ಹೋಗುತ್ತೇನೆ.

ಈ ಮುಸ್ಲಿಂ ಅನಾಥ ಮಗುವಿನ ವಿಷಯದಲ್ಲಿ, ವಿವರಿಸಲಾಗದ ಏನೋ ಸಂಭವಿಸಿತು. ಹಿಂದೂ ಭಗವಂತನ ಹೆಸರನ್ನು ಜಪಿಸುವುದರಲ್ಲಿ ಅವನು ಅಪಾರ ಆಸಕ್ತಿಯನ್ನು ಬೆಳೆಸಿಕೊಂಡನು:

ಹರೇ ರಾಮ ಹರೇ ರಾಮ ರಾಮ ರಾಮ ಹರೇ |

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ||

ಹರಿದಾಸನಿಗೆ ತನ್ನದೇ ಆದದ್ದೇನೂ ಇರಲಿಲ್ಲ. ಹಸಿವಾದಾಗ ಗ್ರಾಮಸ್ಥರಿಂದ ಆಹಾರ ಬೇಡಿಕೊಂಡು ಊಟ ಮಾಡುತ್ತಿದ್ದ. ದಿನಕ್ಕೆ ಒಮ್ಮೆ ಮಾತ್ರ ಊಟ ಮಾಡಿ, ನಂತರ ಜಪದಲ್ಲಿ ನಿರತನಾಗಿದ್ದ. ಬೆನಾಪೋಲ್ ಎಂಬ ದಟ್ಟವಾದ ಕಾಡಿನಲ್ಲಿ ನಿರ್ವಿುಸಲಾದ ಸಣ್ಣಗುಡಿಸಲಿನಲ್ಲಿ ಅವನು ಏಕಾಂಗಿಯಾಗಿ ಇರುತ್ತಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net