

ಭದ್ರಾವತಿ: ವಿಶ್ವಕರ್ಮ ಸಮಾಜದವರು ಎಲ್ಲರೂ ಒಗ್ಗಟ್ಟಾಗಿ ಸಮಾಜ ಸಂಘಟಿಸುವ ಕಾರ್ಯಕ್ಕೆ ಕೈ ಜೋಡಿಸಬೇಕೆಂದು ತಾಲೂಕು ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಬಿ.ಕೆ.ಶ್ರೀನಾಥ್ ಹೇಳಿದರು.
ಭಾನುವಾರ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮಲ್ಲಿ ಒಗ್ಗಟ್ಟು ಬಹಳ ಮುಖ್ಯ. ಸಮಾಜವನ್ನು ಮುನ್ನಡೆಸಿಕೊಂಡು ಹೋಗುವವರಿಗೆ ಎಲ್ಲರೂ ಸಹಕಾರ ನೀಡಬೇಕು. ಸಮಾಜ ಸಂಘಟಿಸುವವರಲ್ಲಿ ಸ್ವಾರ್ಥಭಾವನೆ ಇರಬಾರದು. ಪ್ರತಿಯೊಬ್ಬರು ಸಮಾಜದ ಏಳಿಗೆ ಬಯಸಬೇಕು ಎಂದರು.
ವಿಶ್ವಕರ್ಮ ಸಮಾಜದ ಅಧ್ಯಕ್ಷರಾಗಿ ವಕೀಲ ಎಚ್.ಪಿ.ವಿಶ್ವೇಶ್ವರ ಆಚಾರ್, ಬಿ.ಕೆ. ಶ್ರೀನಾಥ್ (ಗೌರವಾಧ್ಯಕ್ಷ), ಕೆ.ರಾಮಾಚಾರ್, ಬಾರಂದೂರು ಡಾ. ಸಿ.ರಾಮಾಚಾರಿ (ಉಪಾಧ್ಯಕ್ಷರು), ಬಿ.ವಿ.ಸೋಮನಾಥ್ (ಪ್ರಧಾನ ಕಾರ್ಯದರ್ಶಿ), ರವಿಶಂಕರಾಚಾರ್, ಬಿ. ಮಂಜುನಾಥ್ (ಸಹಕಾರ್ಯದರ್ಶಿ), ಬಸವರಾಜಚಾರ್ (ಖಜಾಂಚಿ) ಹಾಗೂ 10 ಜನ ನಿರ್ದೇಶಕರು ಮತ್ತು 6 ಜನ ಸಲಹೆಗಾರರು ಅವಿರೋಧವಾಗಿ ಆಯ್ಕೆಯಾದರು.