

ಸೋಮವಾರಪೇಟೆ: ಶ್ರೀ ಸ್ವರ್ಣಗೌರಿ ಹಬ್ಬದ ಪ್ರಯುಕ್ತ ತೋಳೂರುಶೆಟ್ಟಳ್ಳಿ ಸಬ್ಬಮ್ಮ ಮತ್ತು ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ದುರಸ್ತಿಗೊಂಡಿರುವ ಬಸವನಗುಡಿ ದೇವಾಲಯ ಕೆರೆಯಲ್ಲಿ ನೀರು ತುಂಬಿದ್ದು, ಶಾಸಕ ಡಾ.ಮಂತರ್‌ಗೌಡ, ಮಾಜಿ ಸಚಿವ ಅಪ್ಪಚ್ಚು ರಂಜನ್ ಹಾಗೂ ಗ್ರಾಮಸ್ಥರು ಕೆರೆಗೆ ಬಾಗಿನ ಶುಕ್ರವಾರ ಅರ್ಪಿಸಿದರು.
ಪ್ರಸಕ್ತ ವರ್ಷದ ಮುಂಗಾರು ಮಳೆ ಹೆಚ್ಚು ಸುರಿದ ಪರಿಣಾಮ ಕೃಷಿಗೆ ಬಳಸುವ ಕೆರೆ ಸಂಪೂರ್ಣ ತುಂಬಿರುವ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಗ್ರಾಮದ ಮಹಿಳೆಯರು, ಯುವಕ ಯುವತಿಯರು ಮಕ್ಕಳು ನೀರಿನಲ್ಲಿ ರ‌್ಯಾಪ್ಟಿಂಗ್ ನಡೆಸಿ ಸಂಭ್ರಮಿಸಿದರು. ಇದೇ ಸಂದರ್ಭ ಗ್ರಾಮದ ನಿವೃತ್ತ ಶಿಕ್ಷಕ ಸಿ.ಕೆ.ಶಿವಕುಮಾರ್ ಮತ್ತು ಕೆ.ಚಂದ್ರಮ್ಮ, ದಾನಿ ಸಿಂಗನಹಳ್ಳಿ ವಿನೋದ್ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಅಧ್ಯಕ್ಷ ರಾಜಗೋಪಾಲ್, ಕಾರ್ಯದರ್ಶಿ ಮಹೇಶ್, ಪಂಚಾಯಿತಿ ಮಾಜಿ ಅಧ್ಯಕ್ಷ ಶೇಖರ್ ಗ್ರಾಮಸ್ಥರು ನವೀನ್, ಜಗದೀಶ್, ಟಿ.ಕೆ.ಮಾಚಯ್ಯ, ನಾಗರಾಜು, ಸುಧಾಕರ ಸಿಂಗನಹಳ್ಳಿ, ರವಿ ಇದ್ದರು.