ಈಜುಕೊಳದಲ್ಲಿ ಮಹಿಳೆಯರಿಗೆ ಟಾಪ್‌ಲೆಸ್ ಆಗಿ ಈಜಾಡಲು ಅನುಮತಿ ನೀಡಿದ ಬರ್ಲಿನ್!

swimming pool
Published on

ಜರ್ಮನಿ: ಶೀಘ್ರದಲ್ಲೇ ಬರ್ಲಿನ್​ನ ಸಾರ್ವಜನಿಕ ಈಜುಕೊಳಗಳಲ್ಲಿ ಮಹಿಳೆಯರಿಗೆ ಟಾಪ್ ಲೆಸ್ ಆಗಿ ಹೋಗಲು ಅವಕಾಶ ನೀಡಲಾಗುತ್ತಿದೆ. ಸರ್ಕಾರದ ನಿಯಂತ್ರಣದಲ್ಲಿರುವ ಎಲ್ಲಾ ಈಜುಕೊಳಗಳಲ್ಲಿ ಟಾಪ್​ಲೆಸ್​ ಆಗಿ ಈಜಾಡಲು ಸರ್ಕಾರ ಅನುಮತಿ ನೀಡಿದೆ.

ಟಾಪ್ ಲೆಸ್ ಆಗಿ ಮಹಿಳೆ ಸ್ನಾನ ಮಾಡಿದ್ದಕ್ಕಾಗಿ ಈಜು ಕೊಳದಿಂದ ಹೊರಹಾಕಲ್ಪಟ್ಟಿದ್ದರು. ಈ ವಿಚಾರವಾಗಿ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ಅಲ್ಲಿನ ಸರ್ಕಾರ ಕ್ರಮ ಕೈಗೊಂಡ ನಂತರ ಈ ಹೊಸ ಕ್ರಮ ಕೈಗೊಳ್ಳಲಾಗಿದೆ. ಮಹಿಳೆ ತಾರತಮ್ಯಕ್ಕೆ ಬಲಿಯಾಗಿದ್ದಾಳೆ. ಹೀಗಾಗಿ ಇನ್ಮುಂದೆ ಬರ್ಲಿನ್‌ನ ಈಜುಕೊಳಗಳಿಗೆ ಭೇಟಿ ನೀಡುವ ಈಜುಗಾರರು ಟಾಪ್‌ಲೆಸ್ ಆಗಿ ಹೋಗಲು ಅರ್ಹರಾಗಿದ್ದಾರೆ ಎಂದು ಹೇಳಲಾಗಿದೆ.

ಸಾರ್ವಜನಿಕ ನಗ್ನತೆಯನ್ನು ಸೂಕ್ತ ಮತ್ತು ಆರೋಗ್ಯಕರವೆಂದು ಪರಿಗಣಿಸುವ ದೇಶವಾಗಿದೆ. ಫ್ರೀ ಬಾಡಿ ಕಲ್ಚರ್ ಎಂದು ಕರೆಯಲ್ಪಡುವ ಇಲ್ಲಿಯವರು ಈ ನಿರ್ಧಾರವನ್ನು ಸ್ವಾಗತಿಸುತ್ತಾರೆ. ಆದರೆ ಪುರಸಭೆಯ ಈಜುಕೊಳಗಳಲ್ಲಿ ಅನುಮತಿಸಲಾಗಿದೆಯೇ ಮತ್ತು ಯಾವ ಮಟ್ಟಕ್ಕೆ ಅನುಮತಿಸಲಾಗುತ್ತದೆ ಎಂಬ ವಿಷಯವು ಅನೇಕ ಸ್ಥಳೀಯ ಅಧಿಕಾರಿಗಳನ್ನು ಕಾಡುತ್ತಿದೆ.

ಹೊಸ ನಿಯಮ ಗಂಡು-ಹೆಣ್ಣು ಎನ್ನುವ ಲಿಂಗ ಭೇದ ಇಲ್ಲದೆ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ಹೊಸ ನಿಯಮಗಳನ್ನು ನಿಖರವಾಗಿ ಯಾವಾಗ ಅನ್ವಯಿಸಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net