ಟೆಕ್ಕಿ Suicide ಕೇಸ್​; ಡೆತ್​ನೋಟ್​ನಲ್ಲಿ ಪತ್ನಿಯ ಕರಾಳ ಮುಖ ಬಯಲು.. ಮೃತನ ಸಹೋದರ ಬಿಚ್ಚಿಟ್ಟ ಅಸಲಿ ಸತ್ಯ

Techie
Published on

ಬೆಂಗಳೂರು: ಪತ್ನಿಯ ಕಿರುಕುಳ ತಾಳಲಾರದೆ ಟೆಕ್ಕಿಯೊಬ್ಬರು 24 ಪುಟಗಳ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತರನ್ನು ಉತ್ತರಪ್ರದೇಶ ಮೂಲದ ಅತುಲ್​ ಸುಭಾಷ್​ (34) ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ಪ್ರತಿಷ್ಠಿತ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಮಾರತ್​ಹಳ್ಳಿಯಲ್ಲಿ ವಾಸವಿದ್ದ ಅತುಲ್ ಡಿಸೆಂಬರ್​ 09ರಂದು​ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಶರಣಾಗುವ ಮುನ್ನ ತಮ್ಮ ಎಕ್ಸ್​ ಖಾತೆಯಲ್ಲಿ ಭಾರತದಲ್ಲಿ ಪುರುಷರ ಮೇಲೆ ಕಾನೂನುಬದ್ಧ ನರಮೇಧ ನಡೆಯುತ್ತಿದೆ ಎಂದು ಪೋಸ್ಟ್​ ಮಾಡಿದ್ದರು. ಬಳಿಕ ಆ ಪೋಸ್ಟ್ಅನ್ನು ಡಿಲೀಟ್​ ಮಾಡಿದ್ದಾರೆ.

ಪತ್ನಿಯಿಂದ ದೂರವಾಗಿ ಒಂಟಿಯಾಗಿದ್ದ ಅತುಲ್ ಸುಭಾಷ್, ವೈವಾಹಿಕ ಜೀವನದಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು. ಇತ್ತೀಚೆಗೆ ಆತನ ಪತ್ನಿ ಉತ್ತರ ಪ್ರದೇಶದಲ್ಲಿ ಸುಭಾಷ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಇದರಿಂದ ಸುಭಾಷ್ ತುಂಬಾ ನೊಂದಿದ್ದರು ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾತನಾಡಿರುವ ಮೃತನ ಸಹೋದರ ಬಿಲಾಸ್​ ಕುಮಾರ್​, ನನ್ನ ಸಹೋದರನ ವಿರುದ್ಧ ಆತನ ಪತ್ನಿ, ಅತ್ತೆ, ಸೋದರಮಾವ ಹಾಗೂ ಚಿಕ್ಕಪ್ಪ ಸುಳ್ಳು ದೂರು ದಾಖಲಿಸಿ 3 ಕೋಟಿ ರೂಪಾಯಿ ಕೊಡುವಂತೆ ಬೇಡಿಕೆ ಇರಿಸಿದ್ದರು. ಇದಲ್ಲದೆ ಆತನಿಗೆ ಮಾನಸಿಕ ಕಿರುಕುಳ ನೀಡಲು ಶುರು ಮಾಡಿದರು. ಇದರಿಂದಾಗಿ ತೀವ್ರವಾಗಿ ಮನನೊಂದಿದ್ದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಸಹೋದರ ಬಿಲಾಸ್​ ಕುಮಾರ್​ ಆರೋಪಿಸಿದ್ದಾರೆ.

ಸಾಯುವ ಮುನ್ನ ಏನೇನು ಮಾಡಬೇಕು?

'ಸಾವಿಗೂ ಮುನ್ನ ಸ್ನಾನ ಮಾಡಬೇಕು, ಕಿಟಕಿ ತೆಗೆಯಬೇಕು ಮತ್ತು ಗೇಟ್ ಲಾಕ್ ಮಾಡಬೇಕು. 100 ಬಾರಿ ಶಿವನ ಜಪಿಸಬೇಕು. ಫ್ರಿಜ್ ಮೇಲೆ ರೂಮ್, ಕಾರು ಬೈಕ್ ಕೀ ಇಡಬೇಕು. ಡೆತ್ ನೋಟ್ ಅನ್ನು ಟೇಬಲ್ ಮೇಲೆ ಇಡಬೇಕು. ಡೆತ್ ನೋಟ್ ಅನ್ನು ಹೈಕೋರ್ಟ್, ಸುಪ್ರೀಂಕೋರ್ಟ್, ಕಚೇರಿ, ಕುಟುಂಬಸ್ಥರಿಗೆ ಮೇಲ್ ಕಳಿಸಬೇಕು' ಎಂದು ಅಹುಲ್ ಬರೆದಿದ್ದಾರೆ.

'ಸಾವಿಗೂ ಮುನ್ನ ದಿನ ಹಣಕಾಸಿನ ವಿಚಾರಗಳನ್ನು ಪೂರ್ಣಗೊಳಿಸಬೇಕು. ಕಚೇರಿ ಕೆಲಸ, ಕಾನೂನಾತ್ಮಕ ತಯಾರಿ ಮುಗಿಸಬೇಕು. ಮುಖ್ಯ ದಾಖಲೆಗಳನ್ನು ಪ್ಯಾಕ್ ಮಾಡಬೇಕು ಆನಂತರ ಕೊನೇ ದಿನದ ಆರಂಭಕ್ಕೆ ತಯಾರಾಗಬೇಕು' ಎಂಬುದು ಅವರ ಮೊದಲ ದಿನದ ಟೈಂ ಟೇಬಲ್ ಆಗಿದೆ. ಈತನ ಟೈಮ್ ಟೇಬಲ್ ಪ್ರಕಾರ, ಕೊನೆಯ ದಿನ ವಿಡಿಯೋ ನೋಟ್​ ಮಾಡಬೇಕು. ಮೊಬೈಲ್‌ನಿಂದ ಫಿಂಗ‌ರ್ ಪ್ರಿಂಟ್, ಫೇಸ್ ರೆಕಗ್ನಿಷನ್ ಅಳಿಸಬೇಕು. ಲ್ಯಾಪ್‌ಟಾಪ್, ಟಾರ್ಜರ್, ಕಚೇರಿಯ ಐಡಿ, ಆಫೀಸ್‌ ನಲ್ಲಿಕೆ ಮಾಡಿ ಸ್ಕ್ಯಾನ್ ಮಾಡಿರುವ ಡೆತ್ ನೋಟ್ ಗಳನ್ನು ಅಪ್‌ ಲೋಡ್ ಮಾಡಬೇಕು, ಎಲ್ಲ ಪೇಮೆಂಟ್ಗಳನ್ನು ಕಂಪ್ಲೇಟ್ ಮಾಡಬೇಕು' ಎಂದು ಡೆತ್​ನೋಟ್​ನಲ್ಲಿ ಅತುಲ್​ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net