ಕುಡಿದ ಮತ್ತಿಮಲ್ಲಿ ಸ್ಟೇಜ್​ ಹತ್ತಲು ಹೋಗಿ ಬಿದ್ದ ವರ; ಮುಂದೇನಾಯ್ತು ನೀವೇ ನೋಡಿ

Groom
Published on

ಪಟ್ನಾ: ಇತ್ತೀಚಿನ ದಿನಗಳಲ್ಲಿ ಮದುವೆಗೆ ಸಂಬಂಧಿಸಿದ ಸುದ್ದಿಗಳು ಸದಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುತ್ತವೆ. ಕ್ಷುಲಕ ಕಾರಣಗಳಿಗೆ ಗಲಾಟೆಯಾಗಿ ಮದುವೆಗಳು ಮುರಿದು ಬೀಳುತ್ತಿದ್ದು, ಇದೀಗ ಅಂತಹದ್ದೆ ಘಟನೆಯೊಂದು ಬಿಹಾರದ ಬೇಗುಸರೈನಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವರದಿಗಳ ಪ್ರಕಾರ, ಬುಲ್ಬುಲ್ ಮಹತೋ ಅವರ ಮಗಳು ಕಾಜಿರ್ ಸಲ್ಪುರ್ ಗ್ರಾಮದಲ್ಲಿ ಭುಲ್ಲಾ ಮಹತೋ ಅವರ ಮಗನನ್ನು  ಮದುವೆಯಾಗಬೇಕಿತ್ತು. ಆದರೆ, ವರ (Groom) ಕುಡಿದ ಮತ್ತಿನಲ್ಲಿ ಮದುವೆಮನೆ ಪ್ರವೇಶಿಸಿದ್ದನ್ನು ವಧು ಹಾಗೂ ಆಕೆಯ ಸಂಬಂಧಿಕರು ಗಮನಿಸಿದ್ದು, ಕೂಡಲೇ ಮದುವೆಯನ್ನು ಮಾಡಿಕೊಡಲು ಸಾಧ್ಯವಿಲ್ಲ ಎಂದು ಹೇಳಿ ಕ್ಯಾನ್ಸಲ್​ ಮಾಡಿದ್ದಾರೆ. ಬಳಿಕ ಖರ್ಚಾಗಿರುವ ಹಣವನ್ನು ವಾಪಸ್​ ಕೊಡುವಂತೆ ವಧುವಿನ ಮನೆಯವರು ಪಟ್ಟು ಹಿಡಿದಿದ್ದು, ವರನನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ವರನ ಕಡೆಯವರು ಮದುವೆಮನೆಯನ್ನು ಪ್ರವೇಶಿಸಿದ ಕೂಡಲೇ ವಧುವಿನ ಕುಟುಂಬಸ್ಥರು ಅತಿಥಿಗಳನ್ನು ಸತ್ಕರಿಸಿದ್ದು, ಬಳಿಕ ಊರಿನಲ್ಲಿ ಮೆರವಣಿಗೆ ಮಾಡಿದ್ದಾರೆ. ದೇವಸ್ಥಾನದಲ್ಲಿ ಪೂಜೆ ಮಾಡುವಾಗ ವರನ ಕಾಲುಗಳು ನಡುಗುತ್ತಿದ್ದುದ್ದನ್ನು ಕಂಡ ವಧುವಿನ ಕುಟುಂಬಸ್ಥರು ಆತ ಕುಡಿದು ಬಂದಿರುವ ಶಂಕೆಯನ್ನು ವ್ಯಕ್ತಪಡಿಸಿದ್ಧಾರೆ. ಇದಾದ ಬಳಿಕ ವರ ವೇದಿಕೆ ಮೇಲೆ ಎಡವಿ ಬಿದ್ದಿದ್ದು, ವಧು ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಇದಾದ ಬಳಿಕ ವಧುವಿನ ಕುಟುಂಬಸ್ಥರು ವರನನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಮದುವೆಗೆ ಖರ್ಚು ಮಾಡಿರುವ ಹಣವನ್ನು ಕೊಡುವಂತೆ ಬೇಡಿಕೆ ಇರಿಸಿದ್ದಾರೆ.

ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಉಭಯ ಕುಟುಂಬಸ್ಥರ ಜೊತೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಸಿಗೊಳಿಸಿದ್ದು, ವರನನ್ನು ವಶಕ್ಕೆ ಪಡೆದಿದ್ದಾರೆ. ಆತ ಕಳೆದ 4-5 ವರ್ಷಗಳಿಂದ ನಿರಂತರವಾಗಿ ಮದ್ಯಪಾನ ಮಾಡುತ್ತಿದ್ದು, ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net