ಉಚಿತ ಶಿಕ್ಷಣ, ಹೆಣ್ಣುಮಕ್ಕಳ ಮದುವೆಗೆ ₹1 ಲಕ್ಷ; ಚುನಾವಣೆ ಹೊಸ್ತಿಲಲ್ಲಿ ಭರ್ಜರಿ ಘೋಷಣೆ ಮಾಡಿದ AAP

Arvind Kejriwal
Published on

ನವದೆಹಲಿ: 2025ರ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಆಡಳಿತರೂಢ ಆಮ್​ ಆದ್ಮಿ ಪಕ್ಷವು (AAP) ಈಗಾಗಲೇ ತಯಾರಿ ನಡೆಸಿದ್ದು, ಮತದಾರರನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಭರ್ಜರಿ ಘೋಷಣೆಗಳನ್ನು ಮಾಡುತ್ತಿದೆ.

ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಆಮ್​ ಆದ್ಮಿ ಪಕ್ಷವು (AAP) ಆಟೋ ಚಾಲಕರಿಗೆ (Auto Drivers) ಸಂಬಂಧಿಸಿದಂತೆ ಐದು ಭರ್ಜರಿ ಘೋಷಣೆಗಳನ್ನು ಮಾಡಿದೆ.

Arvind Kejriwal

ಈ ಬಗ್ಗೆ ಮಾತನಾಡಿದ ಎಎಪಿ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್​, ಆಟೋ ಚಾಲಕರಿಗೆ ₹10 ಲಕ್ಷದ ವಿಮೆ, ಆಟೋ ಚಾಲಕರ ಹೆಣ್ಣುಮಕ್ಕಳ ಮದುವೆಗೆ ₹1 ಲಕ್ಷ ಸಹಾಯಧನ, ಆಟೋ ಚಾಲಕರಿಗೆ ವರ್ಷಕ್ಕೆ ಎರಡು ಬಾರಿ ತಲಾ ₹2,500ನಂತೆ ಸಮವಸ್ತ್ರ ಭತ್ಯೆ, Poocho ಆ್ಯಪ್​ಅನ್ನು ರೀಲಾಂಚ್ ಮಾಡಲಾಗುವುದು ಮತ್ತು ಆಟೊ ಚಾಲಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಘೋಷಿಸಿದ್ದಾರೆ.

70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ 2025ರ ಫೆಬ್ರುವರಿಯಲ್ಲಿ ಮತದಾನ ನಡೆಯಲಿದೆ. 2020ರಲ್ಲಿ ನಡೆದ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ ಎಎಪಿ (AAP) 62 ಸ್ಥಾನಗಳಲ್ಲಿ ಗೆದ್ದಿತ್ತು. ಬಿಜೆಪಿ 8 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಉಳಿದಂತೆ ಕಾಂಗ್ರೆಸ್​ ಶೂನ್ಯ ಸುತ್ತಿತ್ತು. ಚುನಾವಣೆಗೆ ಸಂಬಂಧಿಸಿದಂತೆ ಎಎಪಿ ಈಗಾಗಲೇ 11 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net