

ಬೆಂಗಳೂರು: ಮಳೆ ಯಾವಾಗ ಬರುತ್ತದೆ ಅಂತ ಕಾದು ಕಾದು ಸುಸ್ತಾಗಿದ್ದ ರಾಜಧಾನಿ ಜನತೆಗೆ ಕೊನೆಗೂ ಮಳೆರಾಯ ತಂಪೆರೆದಿದ್ದಾನೆ. ಸುಡು ಸುಡು ಕೆಂಡದಂತಿದ್ದ ಬೆಂದಕಾಳೂರು ಇದೀಗ ವರುಣನ ಸಿಂಚನದಿಂದ ಕೊಂಚ ಕೂಲ್ ಕೂಲ್ ಆಗಿದೆ. ಬೇಸಿಗೆಯ ಬಿಸಿಯಿಂದ ತತ್ತರಿಸಿ ಹೋಗಿದ್ದಂತ ಜನತೆಗೆ ಇಂದು ಮಳೆರಾಯನ ಆಗಮನದ ಮೂಲಕ ತಂಪೆರೆದಂತೆ ಆಗಿದೆ. ನಗರದ ಹಲವೆಡೆ ಮಳೆರಾಯ ಆರ್ಭಟಿಸಿದ್ದಾನೆ.
ಬೆಂಗಳೂರು ನಗರದ ವಸಂತಪುರ, ವಿಜಯನಗರ, ಕುಮಾರಸ್ವಾಮಿ ಲೇಔಟ್, ಕಲ್ಯಾಣ ನಗರ, ವೈಟ್ ಫೀಲ್ಡ್, ಕೆಆರ್ ಪುರಂ ಸೇರಿದಂತೆ ವಿವಿಧ ಕಡೆಯಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ಮಳೆ ಬಂದ ಖುಷಿ ನೋಡಿ ಬೆಂಗಳೂರಿಗರು ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೆ, ಮಳೆಯಲ್ಲಿ ಮಿಂದೆದ್ದಿದ್ದಾರೆ.
ಇನ್ನೂ ಸಿಲಿಕಾನ್ ಸಿಟಿಯಲ್ಲಿ ದಿಢೀರ್ ಸುರಿದಂತೆ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತೆ ಆಗಿದೆ. ಕೆಲವೆಡೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.