

Bengaluru: ಬೆಂಗಳೂರಿನ ಟ್ರಾಫಿಕ್ ಅಂದರೆ ಸಾಕು ನೆನಪಾಗುವುದೇ ಜನದಟ್ಟಣೆ ಇರುವಂತಹ ಪ್ರದೇಶಗಳು, ವಾಹನಗಳ ಸಾಲು ಹಾಗೇ ಅವುಗಳ ಹಾರ್ನ್ ಶಬ್ಧ. ಆದರೆ ಅಲ್ಲೊಬ್ಬ ವ್ಯಕ್ತಿ ಅದೇ ಜನದಟ್ಟಣೆ ಇರುವಂತಹ ಟ್ರಾಫಿಕ್ನಲ್ಲಿ ಕ್ಯಾಬ್ನಲ್ಲಿ ಚಲಿಸುತ್ತಾ ಮೇಕೆಯನ್ನು ಕಂಡುಕೊಂಡಿದ್ದು, ಅವನು ತೆಗೆದುಕೊಂಡ ಸೆಲ್ಫಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಶೇರ್ ಕ್ಯಾಬ್ ಬುಕ್ ಮಾಡಿದ್ದ ಪ್ರಯಾಣಿಕನೊಬ್ಬ, ಬೆಂಗಳೂರಿನ ರಸ್ತೆಯಲ್ಲಿ ಪ್ರಯಾಣಿಸುವ ವೇಳೆ ಆತ ಕುಳಿತಿದ್ದ ಸೀಟಿನ ಹಿಂದೆ ಇರುವಂತಹ ಮೇಕೆಯನ್ನು ನೋಡಿ ಹರ್ಷ ವ್ಯಕ್ತಪಡಿಸಿ, ಅದರೊಂದಿಗೆ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ.
ತನ್ನ X (ಎಕ್ಸ್) ಖಾತೆಯಲ್ಲಿ ಪೋಸ್ಟ್ ಮಾಡಿದಾಗ ಘಟನೆ ಕಂಡುಬಂದಿದೆ. ಪ್ರಯಾಣಿಕ ತನ್ನ ಸೀಟಿನ ಹಿಂದೆ ಇರುವಂತಹ ಮೇಕೆಯನ್ನು ನೋಡಿ ನಗುತ್ತಿದ್ದಾನೆ. ಹಾಗೆಯೇ ಅದರೊಂದಿಗೆ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ಚಿತ್ರವು ತ್ವರಿತವಾಗಿ ವೈರಲ್ ಆಗಿ, ಸುಮಾರು ಅರ್ಧ ಮಿಲಿಯನ್ ವೀಕ್ಷಣೆಗಳು, ಸಾವಿರಾರು ಶೇರ್ಗಳು, ಲೈಕ್ಗಳು ಮತ್ತು ಮೀಮ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಿ ತುಳುಕುತ್ತಿದ್ದವು.
ಪ್ರಯಾಣಿಕನ ಪ್ರಕಾರ, ಆ ಪ್ರಾಣಿ ವಾಹನದೊಳಗೆ ಇದೆ ಎಂದು ಮೊದಲು ಅವನು ತಿಳಿದಿಲ್ಲ. ನಂತರ ಆತ ಕ್ಯಾಬ್ನಲ್ಲಿ ಕುಳಿತ ನಂತರ ಮೇಕೆ ಇರುವುದನ್ನು ಅರಿತುಕೊಂಡಿದ್ದಾನೆ. ಭಯಪಡುವ ಬದಲು ಆತ ಖುಷಿಪಟ್ಟು ಆ ಕ್ಷಣವನ್ನು ಸೆಲ್ಫಿಯೊಂದಿಗೆ ಸೆರೆಹಿಡಿಯಲು ಮುಂದಾಗಿದ್ದಾನೆ.
@Basi_cally ಎಂಬ ಪ್ರಯಾಣಿಕ ತನ್ನ ಅಧೀಕೃತ X (ಎಕ್ಸ್) ಖಾತೆಯಲ್ಲಿ ನಾನು ಇಂದು ಶೇರ್ಡ್ ಕ್ಯಾಬ್ನಲ್ಲಿ ಹತ್ತಿದೆ. ಕ್ಯಾಬ್ ಒಳಗೆ ಒಂದು ರೀತಿಯ ಮುಸುಕು ವಾಸನೆ ಬರುತ್ತಿತ್ತು. ಆದನ್ನು ನಾನು ಕಾರಿನ ಸೀಟಿನ ವಾಸನೆ ಎಂದು ಭಾವಿಸಿಕೊಂಡೆ. ಆದರೆ ಅದು ಒಂದು ಜೀವಂತ ಇರುವ ಮೇಕೆ ಕಾರಿನ ಹಿಂಬದಿ ಇರುವುದನ್ನು ಅರಿತುಕೊಂಡೆ ಎಂದು ಬರೆದು ಪೋಸ್ಟ್ ಮಾಡಿದ್ದಾನೆ. ಪೋಸ್ಟ್ ಮಾಡಿ ಕೆಲವು ಸಮಯಗಳ ನಂತರ ಪ್ರಯಾಣಿಕ ಚಿತ್ರವನ್ನು ಡಿಲೀಟ್ ಮಾಡಿದ್ದು, ಕಾರಣ ಏನೆಂಬುದು ತಿಳಿದಿಲ್ಲ.
ಈ ವಿಚಿತ್ರ ದೃಶ್ಯವು ಅಂತರ್ಜಾಲದಲ್ಲಿ ಬೇಗನೆ ಬಿರುಗಾಳಿ ಎಬ್ಬಿಸಿತು. ಸಾವಿರಾರು ಲೈಕ್ಗಳನ್ನು ಗಳಿಸಿತು ಮತ್ತು ಹಾಸ್ಯಮಯ ಪ್ರತಿಕ್ರಿಯೆಗಳಿಗೆ ವೇದಿಕೆಯಾಯಿತು. ಕೆಲವು ಬಳಕೆದಾರರು X ಬಳಕೆದಾರ @Basi_callyರನ್ನು ಗೇಲಿ ಮಾಡಿದ್ದು, ಈ ಚಿತ್ರದಲ್ಲಿ ಎರಡು ಮೇಕೆಗಳನ್ನು ನೋಡಬಹುದು ಎಂದು ಬರೆದುಕೊಂಡಿದ್ದಾರೆ. ಹಾಗೆಯೇ, ನಿಮ್ಮ ಸಹ ಪ್ರಯಾಣಿಕನಿಗೆ ಬೇಕಾದಷ್ಟು ಹುಲ್ಲು ಸಿಗಲಿ ಎಂದು ಇನ್ನೊಬ್ಬ ಬಳಕೆದಾರ ಬರೆದಿದ್ದಾರೆ. (ಏಜೆನ್ಸೀಸ್)